ಸಿಸೇರಿಯನ್‌ಗೆ ನಿಯಮಾವಳಿ: ಅರ್ಜಿ ವಜಾಗೊಳಿಸಿದ ’ಸುಪ್ರೀಂ’

7

ಸಿಸೇರಿಯನ್‌ಗೆ ನಿಯಮಾವಳಿ: ಅರ್ಜಿ ವಜಾಗೊಳಿಸಿದ ’ಸುಪ್ರೀಂ’

Published:
Updated:

ನವದೆಹಲಿ: ಆಸ್ಪತ್ರೆಗಳಲ್ಲಿ ಕೈಗೊಳ್ಳುವ ಸಿಸೇರಿಯನ್‌ ಹೆರಿಗೆ ಸಂಬಂಧ ನಿಯಮಾವಳಿಗಳನ್ನು ರೂಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂ ಕೋರ್ಟ್‌ ವಜಾಗೊಳಿಸಿದೆ.

ಜತೆಗೆ ಅರ್ಜಿದಾರರಿಗೆ ₹25 ಸಾವಿರ ದಂಡ ವಿಧಿಸಿದೆ. ಈ ಮೊತ್ತವನ್ನು ನಾಲ್ಕು ವಾರದ ಒಳಗೆ ಸುಪ್ರೀಂ ಕೋರ್ಟ್‌ ವಕೀಲರ ಸಂಘದಲ್ಲಿ ಠೇವಣಿ ಇಡುವಂತೆ ಸೂಚಿಸಿದೆ.

‘ಸಿಸೇರಿಯನ್‌ ಹೆರಿಗೆಗಳನ್ನು ಹೇಗೆ ಮಾಡಬೇಕು ಎನ್ನುವ ಬಗ್ಗೆ ನ್ಯಾಯಾಲಯ ನಿಯಮಾವಳಿಗಳನ್ನು ರೂಪಿಸಬೇಕು ಎನ್ನುವುದು ನಿಮ್ಮ ಇಚ್ಛೆಯೇ? ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೇ? ಇದು ಕಾನೂನು ಪ್ರಕ್ರಿಯೆಯ ನಿಂದನೆ’ ಎಂದು ನ್ಯಾಯಮೂರ್ತಿಗಳಾದ ರಂಜನ್‌ ಗೊಗೊಯಿ, ಆರ್‌. ಬಾನುಮತಿ ಮತ್ತು ನವೀನ್‌ ಸಿನ್ಹಾ ಅವರನ್ನೊಳಗೊಂಡ ಪೀಠವು ಅಭಿಪ್ರಾಯಪಟ್ಟಿತು.

ರೀಪಕ್‌ ಕನ್ಸಾಲ್‌ ಎನ್ನುವವರು ಈ ಅರ್ಜಿ ಸಲ್ಲಿಸಿದ್ದರು. ಹಣ ಮಾಡುವ ಉದ್ದೇಶದಿಂದ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಅನಗತ್ಯವಾಗಿ ಸಿಸೇರಿಯನ್‌ ಮಾಡಲಾಗುತ್ತದೆ. ಈ ಕುರಿತು ಸ್ಪಷ್ಟವಾದ ನೀತಿಯೇ ಇಲ್ಲ ಎಂದು ಕನ್ಸಾಲ್‌ ಅರ್ಜಿಯಲ್ಲಿ ದೂರಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !