ದೌರ್ಜನ್ಯ ತಡೆ ಮಸೂದೆ ಮಂಡನೆ

7

ದೌರ್ಜನ್ಯ ತಡೆ ಮಸೂದೆ ಮಂಡನೆ

Published:
Updated:

ನವದೆಹಲಿ: ಎಸ್‌ಸಿ/ಎಸ್‌ಟಿ ಕಾಯ್ದೆಯ ಕೆಲವು ಅಂಶಗಳನ್ನು ಬದಲಾಯಿಸಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ರದ್ದುಪಡಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಲಾಗಿದೆ. 

ಕಾಯ್ದೆಯ ಮೂಲ ಅಂಶಗಳನ್ನು ಉಳಿಸಿಕೊಳ್ಳದೇ ಇದ್ದರೆ ಇದೇ 9ರಂದು ‘ಭಾರತ ಬಂದ್‌’ ಮಾಡಲಾಗುವುದು ಎಂದು ದಲಿತ ಸಂಘಟನೆಗಳು ಹೇಳಿದ್ದವು. ಅದಕ್ಕೆ ಮೊದಲೇ ಮಸೂದೆಯನ್ನು ಮಂಡಿಸಲಾಗಿದೆ. 

ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಅಡಿ ದೂರು ದಾಖಲಾದ ಆರೋಪಿಗೆ ನಿರೀಕ್ಷಣಾ ಜಾಮೀನುಅವಕಾಶ ಇರುವುದಿಲ್ಲ ಎಂಬುದು ಕಾಯ್ದೆಯಲ್ಲಿ ಇರುವ ಪ್ರಮುಖ ಪ‍್ರಸ್ತಾವವಾಗಿದೆ. ಹಾಗೆಯೇ ಪ್ರಕರಣ
ದಾಖಲಿಸಿಕೊಳ್ಳುವ ಮೊದಲು ಪೂರ್ವಭಾವಿ ತನಿಖೆ ಮಾಡಬೇಕು ಮತ್ತು ಬಂಧನಕ್ಕೆ ಮೊದಲು ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಹೇಳಲಾಗಿತ್ತು. ಇದನ್ನು ರದ್ದುಪಡಿಸುವ ಪ್ರಸ್ತಾವ ಮಸೂದೆಯಲ್ಲಿ ಇದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !