ನೆಮ್ಮದಿ ಜೀವನಕ್ಕೆ ಕಾನೂನು ಅರಿವು

7
ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಸಿವಿಲ್‌ ನ್ಯಾಯಾಧೀಶ ದೇವರಾಜ್‌ ಸಲಹೆ

ನೆಮ್ಮದಿ ಜೀವನಕ್ಕೆ ಕಾನೂನು ಅರಿವು

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಪ್ರತಿಯೊಬ್ಬರಲ್ಲಿಯೂ ಕಾನೂನಿನ ಅರಿವು ಮೂಡಿದಾಗ ಮಾತ್ರ ಅಪರಾಧಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತವೆ. ಸಮಾಜದಲ್ಲಿ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಎಚ್‌.ದೇವರಾಜ್‌ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ನಗರದ ಹೊರವಲಯದ ಕೆ.ವಿ.ಟಿ ಕ್ಯಾಂಪಸ್‌ನ ಬಿ.ಎಡ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ  ಮಾತನಾಡಿದರು.

‘ಕಾನೂನು ಎಂಬುದು ಮನುಷ್ಯನ ಅವಿಭಾಜ್ಯ ಅಂಗ. ಹುಟ್ಟಿನಿಂದ ಸಾಯುವವರೆಗೂ ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ. ಕಾನೂನುಗಳು ಇಲ್ಲವಾದರೆ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟ. ನಮ್ಮ ಸಂರಕ್ಷಣೆ, ಭದ್ರತೆಗೆಗಾಗಿ ಕಾನೂನುಗಳ ತಿಳಿವಳಿಕೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಇತರರಿಗೆ ಕಾನೂನುಗಳ ಅರಿವು ಮೂಡಿಸಬೇಕು’ ಎಂದು ಹೇಳಿದರು.

‘ಬಡವರಿಗೆ ಉಚಿತ ಕಾನೂನುಗಳ ಸೌಲಭ್ಯ ಒದಗಿಸುವ ಉದ್ದೇಶದಿಂದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ರಚಿಸಲಾಗಿದೆ. ಲೋಕ ಅದಾಲತ್‌ ಮೂಲಕ ಪ್ರಕರಣಗಳನ್ನು ರಾಜಿ ಮಾಡಲಾಗುತ್ತದೆ. ನಾವು ಮಾಡುವ ವೃತ್ತಿ ವ್ಯವಹಾರಗಳಲ್ಲಿ ಕಾನೂನು ಬದ್ಧತೆ ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

ಹಿರಿಯ ವಕೀಲ ಜಿ.ಎಚ್‌.ಹರಿಕುಮಾರ್‌ ಮಾತನಾಡಿ, ‘ಪ್ರತಿಯೊಬ್ಬರಿಗೂ ಜೀವನದಲ್ಲಿ ಕಾನೂನು ಅರಿವು ಅವಶ್ಯ. ಜನಸಂಖ್ಯೆ ಹೆಚ್ಚಿದಂತೆ ಅಪರಾಧಗಳು ಹೆಚ್ಚುತ್ತಿದೆ. ಅಪರಾಧ ಮುಕ್ತ ಸಮಾಜಕ್ಕಾಗಿ ಕಾನೂನಿನ ಅರಿವು ಅಗತ್ಯ. ಅನ್ಯಾಯ, ಮೋಸ, ಶಿಕ್ಷೆಯಿಂದ ದೂರವಿರಬಹುದು. ಈ ಬಗ್ಗೆ ಎಲ್ಲರೂ ತಿಳಿವಳಿಕೆ ಪಡೆಯಬೇಕು’ ಎಂದರು.

 ಪ್ರಾಂಶುಪಾಲ ಶೇಖರ್‌, ವಕೀಲ ಮಂಜುನಾಥ್‌, ವಕೀಲ ಸಂಘದ ಜಂಟಿ ಕಾರ್ಯದರ್ಶಿ ಕೆ.ಎಸ್‌.ನರಸಿಂಹಮೂರ್ತಿ, ವಕೀಲರಾದ ಮಂಜುನಾಥ್‌, ಮಹೇಶ್‌, ಮಂಜುನಾಥ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !