ಕಾಳನಾಯಕನಕಟ್ಟೆ: ಹೆದ್ದಾರಿ ಕುಸಿತ

7

ಕಾಳನಾಯಕನಕಟ್ಟೆ: ಹೆದ್ದಾರಿ ಕುಸಿತ

Published:
Updated:
Deccan Herald

ಕೊಪ್ಪ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಕಾಳನಾಯಕನಕಟ್ಟೆ ಸಮೀಪ ಹರಿಹರಪುರ- ಆಗುಂಬೆ ರಾಜ್ಯ ಹೆದ್ದಾರಿಯ ಎರಡೂ ಪಾರ್ಶ್ವ ಕುಸಿದಿದ್ದು, ವಾಹನ ಸಂಚಾರಕ್ಕೆ ಅಪಾಯ ಉಂಟಾಗಿದೆ.

ಕೆಲ ದಿನಗಳ ಹಿಂದೆ ಈ ರಸ್ತೆಯ ಮೋರಿ ಪಕ್ಕದಲ್ಲಿ ಭೂ ಕುಸಿತ ಸಂಭವಿಸಿತ್ತು. ಅದನ್ನು ಸರಿಪಡಿಸುವಷ್ಟರಲ್ಲಿ ರಸ್ತೆಯ ಇನ್ನೊಂದು ಭಾಗವೂ ಕುಸಿದಿದ್ದು, ನಡು ರಸ್ತೆಯಲ್ಲೂ ಬಿರುಕು ಮೂಡಿದೆ. ಸದ್ಯಕ್ಕೆ ರಸ್ತೆ ಕುಸಿತದಿಂದ ಉಂಟಾಗಿರುವ ಗುಂಡಿಯನ್ನು ತಾತ್ಕಾಲಿಕವಾಗಿ ಮುಚ್ಚಿ ಸರಿಪಡಿಸಲಾಗಿದೆ.

ದಿನಂಪ್ರತಿ ಸಾವಿರಾರು ವಾಹನಗಳು ಓಡಾಡುವ ಈ ಹೆದ್ದಾರಿ ಪಕ್ಕದಲ್ಲಿ ಹಳ್ಳವೊಂದು ಹರಿಯುತ್ತಿದ್ದು, ಸೂಕ್ತ ತಡೆಗೋಡೆಯಿಲ್ಲದ ಕಾರಣ ರಸ್ತೆಗೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಮೋರಿಯೂ ಕಿರಿದಾಗಿರುವುದರಿಂದ ವಾಹನ ಸಂಚಾರಕ್ಕೆ ತೊಡಕಾಗಿದೆ. ಈ ಹಿಂದೆ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆಯವರ ಕಾರು ಇದೇ ಸ್ಥಳದಲ್ಲಿ ಅಪಘಾತಕ್ಕೀಡಾಗಿತ್ತು. ಆದ್ದರಿಂದ ರಸ್ತೆಯನ್ನು ವಿಸ್ತರಿಸಿ, ಹಳ್ಳಕ್ಕೆ ತಡೆಗೋಡೆ ನಿರ್ಮಿಸಬೇಕು. ದೊಡ್ಡ ಮೋರಿ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !