’ನಿರೀಕ್ಷಿತ ಫಲ ನೀಡದ ಇಂದಿನ ಶಿಕ್ಷಣ’

7
ಭಾರತೀಯ ಶಿಕ್ಷಣ ಮಂಡಲ: ಒಂದು ದಿನದ ಅಭ್ಯಾಸ ವರ್ಗ ಉದ್ಘಾಟನೆ

’ನಿರೀಕ್ಷಿತ ಫಲ ನೀಡದ ಇಂದಿನ ಶಿಕ್ಷಣ’

Published:
Updated:
Deccan Herald

ಬಾಗಲಕೋಟೆ : ‘ಭಾರತದ ಇಂದಿನ ಶಿಕ್ಷಣ ಪದ್ಧತಿಯಿಂದ ನಿರೀಕ್ಷಿತ ಫಲ ದೊರೆಕುತ್ತಿಲ್ಲ. ಶಿಕ್ಷಣದ ವ್ಯಾಪಕ ಪ್ರಚಾರದ ನಂತರವೂ ಸಾಮಾಜಿಕ ಅಸಂತುಷ್ಟಿ ಇದೆ’ ಎಂದು ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಹಕಾರ್ಯದರ್ಶಿ ಡಾ. ಅರವಿಂದ ಜೋಶಿ ಹೇಳಿದರು.

ಇಲ್ಲಿನ ಬಿ.ವಿ.ವಿ ಸಂಘದ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದಲ್ಲಿ ಭಾರತೀಯ ಶಿಕ್ಷಣ ಮಂಡಲದ ವತಿಯಿಂದ ಉತ್ತರ ಕರ್ನಾಟಕದ 13 ಜಿಲ್ಲೆಗಳ ಕಾರ್ಯಕರ್ತರಿಗಾಗಿ ಭಾನುವಾರ ಹಮ್ಮಿಕೊಂಡಿದ್ದ ಒಂದು ದಿನದ ಅಭ್ಯಾಸ ವರ್ಗ ಉದ್ಘಾಟಿಸಿ ಮಾತನಾಡಿದ ಅವರು, ‘ಮಕ್ಕಳಿಗೆ ಶಿಕ್ಷಣದ ಜೊತೆ ಉತ್ತಮ ಸಂಸ್ಕೃತಿ ನೀಡುವುದು ಅಗತ್ಯವಾಗಿದೆ’ ಎಂದರು.

‘ಗ್ರೀಕ್, ರೋಮನ್ ಹಾಗೂ ಭಾರತೀಯ ಸಂಸ್ಕೃತಿಗಳು ಪುರಾತನವಾದವು, ಸಂಘರ್ಷದ ಕಾರಣ ಗ್ರೀಕ್, ರೋಮನ ಸಂಸ್ಕೃತಿ ನಶಿಸಿವೆ, ಆದರೆ ದೇಶದ ಸಂಸ್ಕೃತಿ ಇಂದಿಗೂ ಉಳಿದಿದೆ. ಸರ್ವೇಜನ ಸುಖಿನೋ ಭವಂತೂ ಇದು ಭಾರತೀಯ ಸಂಸ್ಕೃತಿ’ ಎಂದರು.

‘ರಾಷ್ಟ್ರ ಭಕ್ತ, ಸಭ್ಯ, ಸುಸಂಸ್ಕೃತ, ಪ್ರಜೆಗಳ ನಿರ್ಮಾಣದ ಹಿನ್ನೆಲೆಯಿಂದ ಶಿಕ್ಷಣ ಮಂಡಲ 1976ರಲ್ಲಿ ಪ್ರಾರಂಭವಾಯಿತು. ದೇಶದ ಶಿಕ್ಷಣ ನೀತಿ ರೂಪಿಸುವಲ್ಲಿ ಭಾರತೀಯ ಶಿಕ್ಷಣ ಮಂಡಲ ಮಹತ್ವದ ಪಾತ್ರ ವಹಿಸಿದೆ. ಪ್ರಾಥಮಿಕ ಶಿಕ್ಷಣದಿಂದ ಸಂಶೋಧನೆವರೆಗೆ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ. ಶಿಕ್ಷಣದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಸಂಘಟಿಸಿದೆ. ಸತ್ಯದ ಶೋಧಕ್ಕಾಗಿ ಸಂಶೋಧನೆ ಮಾಡುವುದು ಭಾರತೀಯ ವಿಚಾರ ಸಂಶೋಧನೆಯ ಲಾಭ ಸಮಾಜಕ್ಕೆ ಮೀಸಲಾಗಬೇಕು. ಅದು ವ್ಯಾಪಾರವಾಗಬಾರದು’ ಎಂದರು.

‘ಇಂದಿನ ಕೃಷಿಯ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಲಾಗುತ್ತಿದೆ. ನಾಗಪುರದಲ್ಲಿ ವಿದ್ಯುತ್ ಇಲ್ಲದೇ ಕೋಲ್ಡ್ ಸ್ಟೋರೆಜ್ ಘಟಕ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಮಾನವೀಯ ಸಂಗತಿಗಳ ರಕ್ಷಣೆ, ಕೌಟುಂಬಿಕ ರಚನೆ, ಉಳಿಕೆ ಇಂತಹ ಚಿಂತಕರೆಲ್ಲರನ್ನು ಒಂದೆಡೆ ತರುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಣದ ಕೊಡುಗೆಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ಭಾರತೀಯ ಶಿಕ್ಷಣ ಮಂಡಲ ಮಾಡುತ್ತಿದೆ’ ಎಂದರು.

ಭಾರತೀಯ ಶಿಕ್ಷಣ ಮಂಡಲದ ಪ್ರಾಂತ ಸಂಯೋಜಕ ಡಾ. ಶ್ರೀನಿವಾಸ ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ದೇಶದ ಶಿಕ್ಷಣ ಪದ್ದತಿ ಬದಲಾಗಬೇಕು. ದೇಶದಾದ್ಯಂತ ಯುವಕರಲ್ಲಿ ದೇಶ ಭಕ್ತಿಯ ಬೀಜ ಬಿತ್ತಿ, ಶಿಕ್ಷಣ ವ್ಯವಸ್ಥೆ ಗಟ್ಟಿಗೊಳಿಸುವಲ್ಲಿ ಭಾರತೀಯ ಶಿಕ್ಷಣ ಮಂಡಲ ಪ್ರಯತ್ನಿಸುತ್ತಿದೆ’ ಎಂದರು.

ವಿಜಯಪುರದ ಬಿ.ಎಲ್.ಡಿ.ಇ ವೈದ್ಯಕೀಯ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಸತೀಶ ಜಿಗಜಿನ್ನಿ, ಶಿಕ್ಷಣ ಮಂಡಲದ ಸಹ ಸಂಘಟನಾ ಕಾರ್ಯದರ್ಶಿ ಶಂಕರಾನಂದ, ದಕ್ಷಿಣದ ಸಹಕಾರ್ಯದರ್ಶಿ ಸುಬ್ರಹ್ಮಣ್ಯ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !