ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಶ್ರೀನಿವಾಸ ನಾಯಕ್

6

ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಶ್ರೀನಿವಾಸ ನಾಯಕ್

Published:
Updated:

ಮಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶ್ರೀನಿವಾಸ ನಾಯಕ್ ಆಯ್ಕೆಯಾಗಿದ್ದಾರೆ.

ಭಾನುವಾರ ನಡೆದ ಚುನಾವಣೆಯಲ್ಲಿ ಸಂಘದ ಉಪಾಧ್ಯಕ್ಷರಾಗಿ ಶರತ್‌ ಶೆಟ್ಟಿ ಕಿನ್ನಿಗೋಳಿ ಮತ್ತು ಮುಹಮ್ಮದ್ ಅನ್ಸಾರ್ ಇನೋಳಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರೀಶ್ ಮೋಟುಕಾನ, ಪುಷ್ಪರಾಜ್ ಬಿ.ಎನ್‌., ಭಾಸ್ಕರ ರೈ. ಕಟ್ಟ, ಸುರೇಶ್ ಡಿ.ಪಳ್ಳಿ, ಆತ್ಮಭೂಷಣ್‌, ಹಿಲರಿ ಕ್ರಾಸ್ತಾ, ರಾಜೇಶ್ ಶೆಟ್ಟಿ, ಹರೀಶ್ ಮಾಂಬಾಡಿ, ಗಂಗಾಧರ್ ಕಲ್ಲಪಳ್ಳಿ, ರವಿಚಂದ್ರ ಭಟ್‌, ಸತ್ಯವತಿ, ಲೋಕೇಶ್ ಪೆರ್ಲಂಪಾಡಿ, ಜೀವನ್ ಬಿ.ಎಸ್‌., ವಿಜಯ್‌ ಆಯ್ಕೆಯಾದರು.

ಅವಿರೋಧ ಆಯ್ಕೆ: ಕೇಂದ್ರ ವಲಯ ಕೋಟಾದಡಿ ಉಪಾಧ್ಯಕ್ಷರಾಗಿ ಇಬ್ರಾಹಿಂ ಅಡ್ಕಸ್ಥಳ, ಕಾರ್ಯದರ್ಶಿಗಳಾಗಿ ಎ.ಸಿದ್ದಿಕ್ ನೀರಾಜೆ (ಗ್ರಾಮೀಣ), ಜಿತೇಂದ್ರ ಕುಂದೇಶ್ವರ (ಕೇಂದ್ರ), ಭುವನೇಶ್ವರ ಜಿ. ಬೆಳ್ತಂಗಡಿ (ಗ್ರಾಮೀಣ), ಕೋಶಾಧಿಕಾರಿಯಾಗಿ ಆರ್.ಎ.ಲೊಹಾನಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಗನ್ನಾಥ ಶೆಟ್ಟಿ ಬಾಳ ಅವಿರೋಧವಾಗಿ ಆಯ್ಕೆಯಾಗಿದ್ದರು.

ಮತ ಗಳಿಕೆ: ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ಗ್ರಾಮೀಣ ಕೋಟಾದಡಿ ಸ್ಪರ್ಧಿಸಿದ್ದ ಮತ್ತೀಕೆರೆ ಜಯರಾಮ್ 137, ವಾಸುದೇವ ಹೊಳ್ಳ ಎಂ. 103, ಪುಂಡಲೀಕ ಭೀಮಪ್ಪ ಬಾಳೋಜಿ 70 ಮತ್ತು ಸೊಗಡು ವಿ.ವೆಂಕಟೇಶ 37 ಮತಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡೆದಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್‌ ಶಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !