ಪಾಪಾಘ್ನಿ ಮಠದಲ್ಲಿ ಆರಾಧನಾ ಮಹೋತ್ಸವ

7

ಪಾಪಾಘ್ನಿ ಮಠದಲ್ಲಿ ಆರಾಧನಾ ಮಹೋತ್ಸವ

Published:
Updated:
Deccan Herald

ಚಿಕ್ಕಬಳ್ಳಾಪುರ: ತಾಲ್ಲೂಕಿನ ಕಳವಾರ ಗ್ರಾಮದ ಬಳಿ ಇರುವ ಪಾಪಾಘ್ನಿ ಮಠದಲ್ಲಿ ಶರಭಯೋಗೇಂದ್ರಸ್ವಾಮಿ 300ನೇ ಆರಾಧನಾ ಮಹೋತ್ಸವ ಪ್ರಯುಕ್ತ ಇತ್ತೀಚೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ರಾಮಾಚಾರ್ಯ ಅವರ ನೇತೃತ್ವದಲ್ಲಿ ಮಠದಲ್ಲಿ ಬೆಳಿಗ್ಗೆ ಸುಪ್ರಭಾತ, ದ್ವಾರಪೂಜೆ, ಧ್ವಜಾರೋಹಣ, ಲಿಂಗಪ್ರತಿಷ್ಠಾಪನೆ, ಗಣಪತಿ ಪೂಜೆ, ಸ್ವಸ್ತಿಪುಣ್ಯಾಹವಚನ, ಕಲಶಪ್ರತಿಷ್ಠಾಪನೆ ಕಾರ್ಯಕ್ರಮಗಳು ನಡೆದವು.

ಶರಭಯೋಗೇಂದ್ರಸ್ವಾಮಿ ಮೂರ್ತಿ, ರುದ್ರಲಿಂಗಕ್ಕೂ, ಅನ್ನಪೂರ್ಣದೇವಿ, ಕಾಶಿವಿಶ್ವನಾಥ ದೇವರಿಗೆ ಪಂಚಾಮೃತ ಅಭಿಷೇಕ ನಡೆಸಲಾಯಿತು. ಅಷ್ಟೋತ್ತರ, ಬಿಲ್ಪಾರ್ಚನೆ, ಅಗ್ನಿ ಪ್ರತಿಷ್ಠಾಪನೆ ಗಣಹೋಮ, ನವಗ್ರಹ ಹೋಮ, ದುರ್ಗಾಹೋಮ, ಮೃತ್ಯುಂಜಯಹೋಮ, ಜಯಾದಿ ಹೋಮ ನೆರವೇರಿಸಲಾಯಿತು.

ಪೂರ್ಣಾಹುತಿ ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು. ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದರು.

ಪಾಪಾಘ್ನಿ ಮಠ ಟ್ರಸ್ಟ್‌ ಅಧ್ಯಕ್ಷ ಸಿ.ಟಿ. ಸಿದ್ದಲಿಂಗಾಚಾರಿ, ಉಪಾಧ್ಯಕ್ಷ ಸೂರ್ಯನಾರಾಯಣಾಚಾರಿ, ಕಾರ್ಯದರ್ಶಿ ಜಿ.ಶಿವಶಂಕರಾಚಾರಿ, ಬೆಂಗಳೂರಿನ ಪ್ರಸನ್ನ ಆಸ್ಪತ್ರೆಯ ವೈದ್ಯರಾದ ಡಾ.ವಿಜಯ್‌ ಕುಮಾರ್‌, ಡಾ.ರವೀಂದ್ರನಾಥ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !