ಪ್ರವೇಶ ಪರೀಕ್ಷೆ: 1,196 ಅಭ್ಯರ್ಥಿಗಳು ಹಾಜರು

7
ಸಶಸ್ತ್ರ ಮೀಸಲು ಪಡೆ ಪೇದೆ ಹುದ್ದೆಗಳ ನೇರ ನೇಮಕಾತಿ

ಪ್ರವೇಶ ಪರೀಕ್ಷೆ: 1,196 ಅಭ್ಯರ್ಥಿಗಳು ಹಾಜರು

Published:
Updated:
Deccan Herald

ಚಿಕ್ಕಬಳ್ಳಾಪುರ: ಸಶಸ್ತ್ರ ಮೀಸಲು ಪಡೆ ಪೇದೆ ಹುದ್ದೆಗಳ ನೇರ ನೇಮಕಾತಿಗೆ ಇತ್ತೀಚೆಗೆ ನಗರದ ನಾಲ್ಕು ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆ ಪ್ರವೇಶ ಪರೀಕ್ಷೆ ಸುಸೂತ್ರವಾಗಿ ನಡೆಯಿತು.

ನಗರದ ಹೊರ ವಲಯದ ಅಗಲಗುರ್ಕಿ ಪದವಿ ಪೂರ್ವ ಕಾಲೇಜು, ಎಸ್‌ಜೆಸಿಐಟಿ ಕ್ಯಾಂಪಸ್‌ನ ಮೂರು ಕೇಂದ್ರಗಳಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12ರ ವರೆಗೆ ಪರೀಕ್ಷೆ ನಡೆಯಿತು.

ಜಿಲ್ಲೆಯಲ್ಲಿ ಈ ಪರೀಕ್ಷೆಗೆ 1,467 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಪರೀಕ್ಷೆಗೆ 1,196 ಮಂದಿ ಹಾಜರಾಗಿದ್ದರು. 271 ಅಭ್ಯರ್ಥಿಗಳು ಪರೀಕ್ಷೆಗೆ ಗೈರಾದರು. ಪರೀಕ್ಷಾ ಕೇಂದ್ರಗಳಿಗೆ ಎಸ್‌ಪಿ ಕಾರ್ತಿಕ್ ರೆಡ್ಡಿ, ಡಿವೈಎಸ್ಪಿ ಪ್ರಭುಶಂಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !