ತಿಮ್ಮಂಪಲ್ಲಿ ಪಂಚಾಯಿತಿ ಎದುರು ಪ್ರತಿಭಟನೆ

7

ತಿಮ್ಮಂಪಲ್ಲಿ ಪಂಚಾಯಿತಿ ಎದುರು ಪ್ರತಿಭಟನೆ

Published:
Updated:
Deccan Herald

ಬಾಗೇಪಲ್ಲಿ: ತಾಲ್ಲೂಕಿನ ಚೆಂಚುರಾಯನಪಲ್ಲಿ, ಕಾಲೋನಿ ಹಾಗೂ ಬೊಮ್ಮಯ್ಯಗಾರಿಪಲ್ಲಿ ಗ್ರಾಮಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಜನರಿಗೆ ಕೆಲಸ ನೀಡುತ್ತಿಲ್ಲ, ಸ್ವಚ್ಛತೆ ಮಾಡುತ್ತಿಲ್ಲ, ನಿವೇಶನ, ಮನೆ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ಚೆಂಚುರಾಯನಪಲ್ಲಿ, ಕಾಲೋನಿ ಹಾಗೂ ಬೊಮ್ಮಯ್ಯಗಾರಿಪಲ್ಲಿ ಗ್ರಾಮಸ್ಥರು ಸಿಪಿಎಂ ಸ್ಥಳೀಯ ಸಮಿತಿ ನೇತೃತ್ವದಲ್ಲಿ ಸೋಮವಾರ ತಿಮ್ಮಂಪಲ್ಲಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ತಾಲ್ಲೂಕು ಘಟಕದ ಕಾರ್ಯದರ್ಶಿ ಚನ್ನರಾಯಪ್ಪ, ‘ಗ್ರಾಮಗಳ ಜನರಿಗೆ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಒದಗಿಸುತ್ತಿಲ್ಲ. 14 ನೇ ಹಣಕಾಸು ಯೋಜನೆಯಲ್ಲಿ ಅವ್ಯವಹಾರ ನಡೆದಿದೆ. ಚಂಚುರಾಯನಪಲ್ಲಿ ಕಾಲೋನಿಯ ಸುತ್ತಮುತ್ತ ಗ್ರಾಮ ಠಾಣೆಯ ಜಾಗದ ಒತ್ತುವರಿ ತೆರವುಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಅರ್ಹ ಫಲಾನುಭವಿಗಳಿಗೆ ಮನೆ, ನಿವೇಶನ ರಹಿತರಿಗೆ ನಿವೇಶನದ ಜತೆಗೆ ಮನೆ ನೀಡಬೇಕು. ಪಂಚಾಯಿತಿ ಕಚೇರಿಗಳು ರಾಜಕೀಯ ಕೇಂದ್ರಗಳಾಗಿರದೇ, ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಜನರ ಮೂಲಭೂತ ಸೌಲಭ್ಯಗಳ ಕಡೆ ಹೆಚ್ಚು ಗಮನ ಹರಿಸಬೇಕು. ಅಧಿಕಾರಿಗಳು ಸಹ ಪಕ್ಷಪಾತ ಮರೆತು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಹೇಳಿದರು.

ತಿಮ್ಮಂಪಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಜಿ.ಕೃಷ್ಣಪ್ಪ ಮಾತನಾಡಿ, ‘ಕೆಲ ಅಧಿಕಾರಿಗಳು ಒಂದು ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಗ್ರಾಮಗಳಲ್ಲಿನ ಚರಂಡಿಗಳು ತುಂಬಿ, ದುರ್ನಾತ ಬೀರುತ್ತಿವೆ. ಸೊಳ್ಳೆಗಳು ಕಚ್ಚಿಸಿಕೊಂಡು ಜನ ಕಾಯಿಲೆಯಿಂದ ನರಳಿ ಆಸ್ಪತ್ರೆಗಳಿಗೆ ಸೇರುತ್ತಿದ್ದಾರೆ. ಪಂಚಾಯಿತಿಯಿಂದ ಸ್ವಚ್ಛತೆ ಕಾರ್ಯ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

ತಿಮ್ಮಂಪಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ನಾರಾಯಣಸ್ವಾಮಿ ಅವರು ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

ಗ್ರಾಮ ಪಂಚಾಯಿತಿ ಸದಸ್ಯ ಜಿ.ಕೃಷ್ಣಪ್ಪ, ಮುಖಂಡರಾದ ಭಾಷಾ ಸಾಬ್, ಸಿ.ವಿ.ವೆಂಕಟರವಣಪ್ಪ, ಎಸ್.ನಂದಕುಮಾರ್, ಎಸ್.ವೆಂಕಟರೆಡ್ಡಿ, ಚಿನ್ನಕೃಷ್ಣಪ್ಪ, ನಾಗಪ್ಪ, ನವೀನ್‌ ಕುಮಾರ್, ಎನ್.ಸೋಮಶೇಖರ್, ಲಕ್ಷ್ಮೀನರಸಪ್ಪ, ಕೃಷ್ಣವೇಣಮ್ಮ, ಚಿನ್ನರಾಮಪ್ಪ, ಶ್ರೀನಿವಾಸ, ರತ್ನಮ್ಮ, ಗಂಗುಲಮ್ಮ, ವೆಂಕಟಲಕ್ಷ್ಮಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !