ನಿವೃತ್ತ ಐಪಿಎಸ್‌ ಅಧಿಕಾರಿ ಪಾತ್ರ: 6 ಸಿಬ್ಬಂದಿ ವಜಾ

7
ಕೆಜಿಎಫ್‌ನಲ್ಲಿ ಪೊಲೀಸ್‌ ಬ್ಯಾಕ್‌ಲಾಗ್‌ ಹುದ್ದೆ ನೇಮಕಾತಿ ಅಕ್ರಮ

ನಿವೃತ್ತ ಐಪಿಎಸ್‌ ಅಧಿಕಾರಿ ಪಾತ್ರ: 6 ಸಿಬ್ಬಂದಿ ವಜಾ

Published:
Updated:

ಕೋಲಾರ: ಜಿಲ್ಲೆಯ ಕೆಜಿಎಫ್‌ ಪೊಲೀಸ್‌ ಜಿಲ್ಲೆ ವ್ಯಾಪ್ತಿಯ 6 ಮಂದಿ ಪೊಲೀಸ್‌ ಸಿಬ್ಬಂದಿಯನ್ನು ಅಕ್ರಮ ನೇಮಕಾತಿ ಆರೋಪದ ಮೇಲೆ ವಜಾ ಮಾಡಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ಲೋಕೇಶ್‌ ಆದೇಶ ಹೊರಡಿಸಿದ್ದಾರೆ.

ವಜಾಗೊಂಡಿರುವ 6 ಮಂದಿಯೂ ನಿವೃತ್ತ ಐಪಿಎಸ್‌ ಅಧಿಕಾರಿ ಎಚ್‌.ಆರ್‌.ಭಗವಾನ್‌ದಾಸ್‌ರ ಸಂಬಂಧಿಕರು. ಹಿಂದೆ ಕೆಜಿಎಫ್‌ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿಯಾಗಿದ್ದ ಭಗವಾನ್‌ದಾಸ್‌ ನಿವೃತ್ತಿಗೂ ಮುನ್ನ 2016ರ ಜುಲೈ ತಿಂಗಳಲ್ಲಿ ಇವರನ್ನು ಪರಿಶಿಷ್ಟ ಪಂಗಡದ (ಎಸ್‌ಟಿ) ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಅಕ್ರಮವಾಗಿ ನೇರ ನೇಮಕಾತಿ ಮಾಡಿದ್ದರು.

ಹುದ್ದೆ ಆಕಾಂಕ್ಷಿಗಳಾಗಿದ್ದ ವೆಂಕಟರಾಮು, ರೇಣುಕಾ ಮತ್ತು ಗೀತಾ ಎಂಬುವರು ಅಕ್ರಮ ನೇಮಕಾತಿ ಸಂಬಂಧ ಆಗಿನ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌ ಮತ್ತು ಕೇಂದ್ರ ವಲಯ ಐಜಿಪಿಗೆ 2016ರ ಜುಲೈನಲ್ಲಿ ದೂರು ಕೊಟ್ಟಿದ್ದರು.

ಬಳಿಕ ಐಜಿಪಿಯು ತನಿಖೆ ನಡೆಸಿ, ಭಗವಾನ್‌ದಾಸ್‌ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಂಬಂಧಿಕರನ್ನು ಇಲಾಖೆ ಹುದ್ದೆಗಳಿಗೆ ನೇಮಕ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದ ಕಾರಣ ನೇಮಕಾತಿ ರದ್ದುಗೊಳಿಸಬೇಕೆಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ 2016ರ ಜುಲೈನಲ್ಲಿ ವರದಿ ಕೊಟ್ಟಿದ್ದರು.

ಆ ವರದಿ ಆಧರಿಸಿ ಓಂಪ್ರಕಾಶ್‌ ಅವರು ನೇಮಕಾತಿ ತಡೆಹಿಡಿದು ಆದೇಶ ಹೊರಡಿಸಿದ್ದರು. ನಂತರ ನಾಲ್ಕೈದು ದಿನದಲ್ಲೇ ಹೊಸ ಆದೇಶ ಹೊರಡಿಸಿ, ಮೊದಲಿನ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವುದಾಗಿ ತಿಳಿಸಿ ಸಿಬ್ಬಂದಿಗೆ ಸೇವೆಯಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಿದ್ದರು.

ಸಿಐಡಿ ತನಿಖೆಯಲ್ಲಿ ಸಾಬೀತು: ಓಂಪ್ರಕಾಶ್‌ರ ನಿವೃತ್ತಿ ನಂತರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು. ಸಿಐಡಿ ತನಿಖೆಯಲ್ಲಿ ಅಕ್ರಮ ನೇಮಕಾತಿ ಸಾಬೀತಾಗಿದ್ದು, ಈ ಸಂಬಂಧ ಅಧಿಕಾರಿಗಳು ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿರಾಜು ಅವರಿಗೆ ಇತ್ತೀಚೆಗೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ನೀಲಮಣಿರಾಜು ಎಸ್ಪಿ ಲೋಕೇಶ್‌ ಅವರಿಗೆ ಆದೇಶಿಸಿದ್ದರು. ಅವರ ಆದೇಶದಂತೆ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !