ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌: ಪ್ರಶಸ್ತಿ ಮೇಲೆ ಗುಜರಾತ್‌ ಕಣ್ಣು

7

ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌: ಪ್ರಶಸ್ತಿ ಮೇಲೆ ಗುಜರಾತ್‌ ಕಣ್ಣು

Published:
Updated:
Deccan Herald

ಬೆಂಗಳೂರು: ಗುಜರಾತ್‌ ತಂಡದವರು ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.

ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನ ಎರಡನೆ ಮೈದಾನದಲ್ಲಿ ಶುಕ್ರವಾರ ಆರಂಭ ವಾಗುವ ಫೈನಲ್‌ನಲ್ಲಿ ಗುಜರಾತ್‌ ತಂಡ ಉತ್ತರ ಪ್ರದೇಶ ಸಂಸ್ಥೆ ಎದುರು ಸೆಣಸಲಿದೆ.

ಛತ್ತೀಸಗಡ ಎದುರಿನ ಸೆಮಿಫೈನಲ್‌ನಲ್ಲಿ ಇನಿಂಗ್ಸ್‌ ಮುನ್ನಡೆ ಪಡೆದು ಫೈನಲ್‌ಗೆ ಲಗ್ಗೆ ಇಟ್ಟಿರುವ ಗುಜರಾತ್‌ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ.

ಕ್ಷಿತಿಜ್‌ ಪಟೇಲ್‌, ಪಾರ್ಥೀವ್‌ ಪಟೇಲ್‌, ಮನ್‌ಪ್ರೀತ್‌ ಜುನೇಜಾ ಮತ್ತು ಭಾರ್ಗವ್‌ ಮೆರಾಯ್‌ ಅವರು ಬ್ಯಾಟಿಂಗ್‌ನಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ.

ಕ್ಷಿತಿಜ್‌ ಅವರು ಸೆಮಿಫೈನಲ್‌ನಲ್ಲಿ ದ್ವಿಶತಕ ಸಿಡಿಸಿ ಗಮನ ಸೆಳೆದಿದ್ದರು. ಪಾರ್ಥೀವ್‌, ಮನ್‌ಪ್ರೀತ್‌ ಮತ್ತು ಮೆರಾಯ್‌ ಅವರು ಅರ್ಧಶತಕಗಳನ್ನು ದಾಖಲಿಸಿದ್ದರು.

ಬೌಲಿಂಗ್‌ನಲ್ಲಿ ಕರಣ್‌ ಪಟೇಲ್‌, ಪಾರ್ಥ ವಘಾನಿ ಮತ್ತು ಹಾರ್ದಿಕ್‌ ಪಟೇಲ್‌ ಅವರು ತಂಡದ ಶಕ್ತಿಯಾಗಿದ್ದಾರೆ.

ಉತ್ತರ ಪ್ರದೇಶ ತಂಡ ಕೂಡಾ ಪ್ರಶಸ್ತಿಯ ಕನವರಿಕೆಯಲ್ಲಿದೆ. ಈ ತಂಡ ಮೊದಲ ಸೆಮಿಫೈನಲ್‌ನಲ್ಲಿ ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌ ಎದುರು 9 ವಿಕೆಟ್‌ಗಳಿಂದ ಗೆದ್ದಿತ್ತು.

ಉಮಂಗ್‌ ಶರ್ಮಾ, ಅಕ್ಷದೀಪ್‌ ನಾಥ್‌, ರಿಂಕು ಸಿಂಗ್‌ ಮತ್ತು ಉಪೇಂದ್ರ ಯಾದವ್‌ ಅವರು ಗುಜರಾತ್‌ ಬೌಲರ್‌ಗಳನ್ನು ಕಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಆಲ್‌ರೌಂಡರ್‌ಗಳಾದ ಶಿವಂ ಚೌಧರಿ ಮತ್ತು ಜೀಶನ್‌ ಅನ್ಸಾರಿ ಅವರ ಬಲವೂ ಈ ತಂಡಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !