ಕಾಲುವೆ ಮೂಲಕ ಎತ್ತಿನಹೊಳೆ ನೀರು

7
ಯೋಜನೆ ತ್ವರಿತಗತಿಯ ಅನುಷ್ಟಾನಕ್ಕೆ ಹೊಸ ಉಪಾಯ, ಕಾಲುವೆಯಿಂದ ನೀರೆತ್ತುವುದು ತಡೆಯಲು ಹೊಸ ಕಾನೂನು ಜಾರಿಗೆ ಚಿಂತನೆ – ಡಿ.ಕೆ.ಶಿವಕುಮಾರ್

ಕಾಲುವೆ ಮೂಲಕ ಎತ್ತಿನಹೊಳೆ ನೀರು

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆಯ ನೀರನ್ನು ಪೈಪ್‌ಲೈನ್ ಬದಲು ತೆರೆದ ಕಾಲುವೆಯಲ್ಲಿ ತರಲು ತೀರ್ಮಾನಿಸಲಾಗಿದೆ. ಹೀಗೆ ಮಾಡಿದರೆ ಮೂರು ತಿಂಗಳಲ್ಲಿ ನೀರು ತರಲು ಸಾಧ್ಯವಿದೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯೋಜನೆಯ ತ್ವರಿತ ಅನುಷ್ಟಾನದ ನಿಟ್ಟಿನಲ್ಲಿ ಈ ಹೊಸ ಉಪಾಯ ಕಂಡುಹಿಡಿದ್ದೇವೆ. ತೆರೆದ ಕಾಲುವೆಯಿಂದ ಅಕ್ಕಪಕ್ಕದ ಜಮೀನಿನವರು ಪಂಪ್‌ಸೆಟ್‌ ಮೂಲಕ ನೀರು ಎತ್ತದಂತೆ ತಡೆಯಲು ನಮ್ಮ ಮತ್ತು ಇಂಧನ ಇಲಾಖೆಗಳು ಸೇರಿ ಹೊಸ ಕಾನೂನು ತರಲು ಸಿದ್ಧತೆ ನಡೆಸಿವೆ’ ಎಂದು ತಿಳಿಸಿದರು.

‘ಅಖಂಡ ಕರ್ನಾಟಕದ ಚಿಂತನೆ ಮಾಡುವ ಎಲ್ಲ ವರ್ಗದ ಜನರ ಸರ್ಕಾರ ನಮ್ಮದು. ಈ ಸರ್ಕಾರದಲ್ಲಿ ಉತ್ತರ ಕರ್ನಾಟಕಕ್ಕೆ ಸಹ ಹೆಚ್ಚು ಆದ್ಯತೆ ದೊರೆತಿದೆ. ಆದರೆ ಕೆಲವರು ಲೋಕಸಭೆ ಚುನಾವಣೆ ಸಮೀಪಿಸಿತು ಎಂದು ನಾವೇನೋ ಆ ಭಾಗಕ್ಕೆ ಅನ್ಯಾಯ ಮಾಡಿರುವಂತೆ ಬಿಂಬಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 40 ಸಕ್ಕರೆ ಕಾರ್ಖಾನೆಗಳಿವೆ. ಶೇ50 ರಷ್ಟು ವಿದ್ಯುತ್ ಅಲ್ಲಿಗೆ ಪೂರೈಸಲಾಗುತ್ತದೆ. ನಾವು ತಾರತಮ್ಯ ಮಾಡುತ್ತಿಲ್ಲ’ ಎಂದರು.

‘ಕೆಲವರಿಗೆ ನಮ್ಮ ಸರ್ಕಾರ ನೋಡಿಕೊಂಡು ಸಹಿಸಲಾಗದೆ, ತಮಗೆ ಅಧಿಕಾರ ಸಿಗಲಿಲ್ಲ ಎಂಬ ಅಸೂಹೆಯಿಂದ ದಿನವೀಡಿ ಕೈ ಹೊಸೆದುಕೊಂಡು ಕುಳಿತಿದ್ದಾರೆ. ಅಸೂಹೆಗೆ ಮದ್ದಿಲ್ಲ. ಅದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಾವಂತೂ ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯ ಮಾಡುತ್ತೇವೆ’ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !