ಪ್ರಥಮ ಚಿಕಿತ್ಸೆ: ಮಾಹಿತಿ ಕಾರ್ಯಕ್ರಮ

6

ಪ್ರಥಮ ಚಿಕಿತ್ಸೆ: ಮಾಹಿತಿ ಕಾರ್ಯಕ್ರಮ

Published:
Updated:
Deccan Herald

ಸಾಲಿಗ್ರಾಮ (ಬ್ರಹ್ಮಾವರ): ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ವಾಣಿ ವಿಲಾಸಿನಿ ಸಂಸ್ಕೃತ ಪಾಠಶಾಲೆಯಲ್ಲಿ ರಾಷ್ಟ್ರೀಯ ಮೂಳೆ ಹಾಗೂ ಕೀಲು ದಿನಾಚರಣೆಯ ಪ್ರಯುಕ್ತ ಗುರುನರಸಿಂಹ ದೇವಸ್ಥಾನ ಮತ್ತು ಯುವವೇದಿಕೆ, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ಸಹಯೋಗದೊಂದಿಗೆ ಮಂಗಳೂರಿನ ಕೆನರಾ ಅರ್ಥೋಪೆಡಿಕ್ ಸೊಸೈಟಿಯ ವತಿಯಿಂದ ರಸ್ತೆ ಅಪಘಾತ ಸಂದರ್ಭದಲ್ಲಿ ನೀಡಬಹುದಾದ ಪ್ರಥಮ ಚಿಕಿತ್ಸೆಯ ಕುರಿತು ಜಾಗ್ರತೆ ಹಾಗೂ ತರಬೇತಿ ಕಾರ್ಯಾಗಾರವನ್ನು ಇತ್ತೀಚೆಗೆ ನಡೆಯಿತು.

ಗುರುನರಸಿಂಹ ದೇವಸ್ಥಾನದ ಆಡಳಿತಮಂಡಳಿಯ ಕೋಶಾಧಿಕಾರಿ ಎ.ಪ್ರಸನ್ನ ತುಂಗ ಕಾರ್ಯಾಗಾರವನ್ನು ಉದ್ಘಾಟಿಸಿದರು. ಧರ್ಮದರ್ಶಿ ವೈ.ಸದಾರಾಮ ಹೇರ್ಳೆ, ಕೂಟ ಮಹಾಜಗತ್ತಿನ ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ ಐತಾಳ, ಯುವವೇದಿಕೆ ಅಧ್ಯಕ್ಷ ಪಿ.ವೈ. ಕೃಷ್ಣಪ್ರಸಾದ ಹೇರ್ಳೆ ಉಪಸ್ಥಿತರಿದ್ದರು.

ಯೆನಪೋಯ ವೈದ್ಯಕೀಯ ಮಹಾವಿದ್ಯಾಲಯದ ಡಾ.ಪಿ.ಜನಾರ್ದನ ಐತಾಳ್, ಕಸ್ತೂರ ಬಾ ವೈದ್ಯಕೀಯ ಮಹಾವಿದ್ಯಾಲಯದ ಡಾ.ಈಶ್ವರ್ ಕೀರ್ತಿ ಹಾಗೂ ಡಾ.ಮಹೇಶ್ ಕುಲಕರ್ಣಿ ಅವರು ಮಾಹಿತಿ ನೀಡಿದರು.

ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಸಬೇಕಾದ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಬ್ರಹ್ಮಾವರದ ಸರ್ಕಲ್ ಇನ್‌ಸ್ಪೆಕ್ಟರ್ ಸತೀಶ್ ಮಾಹಿತಿ ನೀಡಿದರು. ಕೋಟ ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ಸಹಕರಿಸಿದರು. ಕೂಟ ಮಹಾಜಗತ್ತಿನ ಕೇಂದ್ರ ಸಂಸ್ಥೆಯ ಕೋಶಾಧಿಕಾರಿ ಪಿ.ಮಂಜುನಾಥ ಉಪಾಧ್ಯ ಸ್ವಾಗತಿಸಿದರು.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !