ಜಿಲ್ಲೆಯಲ್ಲಿ ‘ಕಿನಾರೆ’ ಸಿನಿಮಾ ಪ್ರಚಾರ

7

ಜಿಲ್ಲೆಯಲ್ಲಿ ‘ಕಿನಾರೆ’ ಸಿನಿಮಾ ಪ್ರಚಾರ

Published:
Updated:

ಕೋಲಾರ: ‘ಜಿಲ್ಲೆಯ ಪ್ರೇಕ್ಷಕರು ಕನ್ನಡ ಸಿನಿಮಾಗಳನ್ನು ನೋಡುವುದಿಲ್ಲವೆಂಬ ಅಪವಾದ ಸುಳ್ಳು ಮಾಡುವ ಸಲುವಾಗಿ ಕಿನಾರೆ ಚಿತ್ರದ ಪ್ರಚಾರವನ್ನು ಜಿಲ್ಲೆಯಿಂದಲೇ ಆರಂಭಿಸಲಾಗುತ್ತಿದೆ’ ಎಂದು ಕಿನಾರೆ ಚಿತ್ರದ ನಟ ಸತೀಶ್‌ರಾಜ್ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇವರಾಜ್‌ ಪೂಜಾರಿ ನಿರ್ದೇಶನದ ಕಿನಾರೆ ಚಿತ್ರವು ಪ್ರೇಮ ಕಥೆ ಹೊಂದಿದೆ. ಇಡೀ ಕುಟುಂಬ ಚಿತ್ರ ವೀಕ್ಷಿಸಬಹುದು. ಜಿಲ್ಲೆಯಾದ್ಯಂತ ಕಾಲೇಜುಗಳಲ್ಲಿ ಪ್ರಚಾರ ನಡೆಸಿ ಯುವಕ ಯುವತಿಯರನ್ನು ಆಕರ್ಷಿಸಲಾಗುತ್ತದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಯಾಗಲಿದೆ’ ಎಂದರು.

‘ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ಪ್ರಚಾರ ಕಾರ್ಯ ನಡೆಯುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜಿಲ್ಲೆಯ ಜನ ಕನ್ನಡ ಭಾಷೆ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ. ಚಿತ್ರದಲ್ಲಿ ಬಹುತೇಕ ಹೊಸ ತಾರಾಗಣವಿದೆ. ಚಿತ್ರದ 5 ಹಾಡುಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಯೂಟ್ಯೂಬ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ’ ಎಂದು ತಿಳಿಸಿದರು.

ಚಿತ್ರದ ನಟಿ ಗೌತಮಿ, ಸಹ ನಟ ಚಿರು ಎನ್.ಗೌಡ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !