ಸಾಂದೀಪನಿ ಶಾಲೆಗೆ ಸಮಗ್ರ ಪ್ರಶಸ್ತಿ

7

ಸಾಂದೀಪನಿ ಶಾಲೆಗೆ ಸಮಗ್ರ ಪ್ರಶಸ್ತಿ

Published:
Updated:
Deccan Herald

ಸೋಮವಾರಪೇಟೆ: ಸಾರ್ವಜನಿಕ ಶಿಕ್ಷಣಾ ಇಲಾಖೆ ವತಿಯಿಂದ ನಡೆದ ಸೋಮವಾರಪೇಟೆ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಇಲ್ಲಿನ ಸಾಂದೀಪನಿ ಆಂಗ್ಲ ಮಾದ್ಯಮ ಶಾಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಕಿರಿಯ ಪ್ರಾಥಮಿಕ ಶಾಲಾ ಕನ್ನಡ ಕಂಠ ಪಾಟ ಸ್ಪರ್ಧೆಯಲ್ಲಿ ವಿ. ಶೋಭಿತಾ (ಪ್ರಥಮ), ಇಂಗ್ಲಿಷ್ ಕಂಠಪಾಟ ಸ್ಪರ್ಧೆಯಲ್ಲಿ ಎಸ್. ದಿಯಾ(ಪ್ರಥಮ), ಸಂಸ್ಕೃತ ಪಠಣದಲ್ಲಿ ಎಸ್. ಸ್ಫಟಿಕಾ(ಪ್ರಥಮ), ಕಥೆ ಹೇಳುವುದು ಮತ್ತು ಅಭಿನಯ ಗೀತೆಯಲ್ಲಿ ಎಸ್. ದಿಯಾ (ಪ್ರಥಮ) ಸ್ಥಾನ, ಜಾನಪದ ನೃತ್ಯ ಹರ್ಷಿಣಿ ಮತ್ತು ತಂಡ (ಪ್ರಥಮ), ಕೋಲಾಟ ಹಸ್ಮೀಯ ಮತ್ತು ತಂಡ (ಪ್ರಥಮ), ಭಕ್ತಿಗೀತೆಯಲ್ಲಿ ಸಮೀಕ್ಷಾ (ತೃತೀಯ) ಸ್ಥಾನ ಗಳಿಸಿದ್ದಾರೆ.

ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಮತ್ತು ಇಂಗ್ಲಿಷ್ ಕಂಠ ಪಾಟದಲ್ಲಿ ಕೆ.ಎ. ಸುಧೀಕ್ಷ (ಪ್ರಥಮ), ಹಿಂದಿ ಮತ್ತು ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಸುಧನ್ವ(ಪ್ರಥಮ), ಕಥೆ ಹೇಳುವುದು ಮತ್ತು ಆಶುಭಾಷಣದಲ್ಲಿ ಎಸ್.ವಿ ದಿಯಾ (ಪ್ರ), ದೇಶಭಕ್ತಿ ಗೀತೆ ಹಿಮಾನಿ ಮತ್ತು ತಂಡ (ಪ್ರಥಮ) ಸ್ಥಾನ ಗಳಿಸಿದ್ದಾರೆ. ಕೋಲಾಟದಲ್ಲಿ ನಿಸರ್ಗ ಮತ್ತು ತಂಡ (ಪ್ರಥಮ), ಜಾನಪದ ನೃತ್ಯ ಸೋನಾ ತಂಡ (ದ್ವಿತೀಯ), ಲಘು ಸಂಗೀತ– ವಿದ್ಯಾಲಕ್ಷ್ಮೀ (ದ್ವಿತೀಯ), ರಸಪ್ರಶ್ನೆ ಸ್ಪರ್ಧೆ– ಸುಧನ್ವ ತಂಡ(ತೃತೀಯ) ಸ್ಥಾನ ಗಳಿಸಿದ್ದಾರೆ.‌

ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಎಸ್. ಗಾನ (ಪ್ರಥಮ), ಇಂಗ್ಲಿಷ್ ಭಾಷಣ ಎಸ್. ಲಿಖಿತಾ (ತೃತೀಯ), ಹಿಂದಿ ಭಾಷಣ ಸಿ.ಪಿ. ಅನೂಶ (ದ್ವಿತೀಯ), ಸಂಸ್ಕೃತ ಪಠಣ ವೈ.ವಿ. ಅಮೂಲ್ಯ (ಪ್ರಥಮ), ರಂಗೋಲಿ– ಬಿ.ಆರ್ ಧನ್ಯಶ್ರೀ (ಪ್ರಥ), ಆಶುಭಾಷಣ–ಕೆ.ಜೆ. ಸಂಜನಾ(ಪ್ರಥಮ), ಜಾನಪದ ಗೀತೆ– ವೈ.ವಿ. ಅಮೂಲ್ಯ (ದ್ವಿತೀಯ), ಚರ್ಚಾಸ್ಪರ್ಧೆ ಎಸ್.ಎಸ್. ಪ್ರೇಕ್ಷಿತ (ದ್ವಿತೀಯ), ನೃತ್ಯ ಕಲೋತ್ಸವ ಮಾಳವಿಕ ತಂಡ (ದ್ವಿತೀಯ), ದೃಶ್ಯಕಲೆ–ವೈ.ಎಂ. ನಿಸರ್ಗ ತಂಡ(ತೃತೀಯ), ಸಂಗೀತ ಕಲೋತ್ಸವ ಮೋಕ್ಷಿತ ತಂಡ (ದ್ವಿತೀಯ) ಸ್ಥಾನ ಗಳಿಸಿದ್ದಾರೆ.

 
 
Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !