ಸಾಲ ಮನ್ನಾ ಮಾಡದಿದ್ದರೆ ಮೌನ ಮೆರವಣಿಗೆ

7

ಸಾಲ ಮನ್ನಾ ಮಾಡದಿದ್ದರೆ ಮೌನ ಮೆರವಣಿಗೆ

Published:
Updated:

ಚಿಕ್ಕಬಳ್ಳಾಪುರ: ‘ರಾಜ್ಯ ಸರಕಾರ ಆಗಸ್ಟ್‌ 14ರ ಒಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ಆ.15 ರಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಕಪ್ಪುಪಟ್ಟಿ ಧರಿಸಿ ಮೌನ ಮೆರವಣಿಗೆ ಮಾಡುತ್ತೇವೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಲಕ್ಷ್ಮಿನಾರಾಯಣರೆಡ್ಡಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ಆದರೆ ಇತ್ತೀಚೆಗೆ ಸಹಕಾರ ಬ್ಯಾಂಕ್‌ಗಳಲ್ಲಿನ ಸಾಲದ ಪೈಕಿ ₨1 ಲಕ್ಷ ಸಾಲ ಮಾತ್ರ ಮನ್ನಾ ಘೋಷಣೆ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಅವರ ಬದುಕು ಹಸನಾಗಬೇಕಾದರೆ ಎಲ್ಲಾ ಬ್ಯಾಂಕ್‌ಗಳಲ್ಲಿರುವ ಸಾಲ ಸಂಪೂರ್ಣ ಮನ್ನಾ ಆಗಲೇ ಬೇಕು. ಸಾಲ ಮನ್ನಾ ಮಾಡದಿದ್ದರೆ ರೈತರು ಆ.15 ರಂದು ತಲೆಗೆ ಕಪ್ಪು ವಸ್ತ್ರ ಸುತ್ತಿಕೊಂಡು ಮೆರವಣಿಗೆ ನಡೆಸಲಿದ್ದಾರೆ’ ಎಂದು ಹೇಳಿದರು.

ರೈತಸಂಘದ ರಾಜ್ಯ ಘಟಕದ ವಿಭಾಗದ ಕಾರ್ಯದರ್ಶಿ ಯಾಕುಬ್ ಷರೀಫ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ಪದಾಧಿಕಾರಿಗಳಾದ ಸಿ.ಆರ್.ನಾರಾಯಣಸ್ವಾಮಿ, ರೆಡ್ಡಪ್ಪ, ಶಂಕರ್ ರೆಡ್ಡಿ, ಕೆ.ವೆಂಕಟರೆಡ್ಡಿ, ವೆಂಕಟರವಣಪ್ಪ, ಕೆ.ನಾರಾಯಣಸ್ವಾಮಿ, ಎಸ್.ಎಂ.ರವಿಪ್ರಕಾಶ್, ರಮೇಶ್ ಬಾಬು, ರಾಮರೆಡ್ಡಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !