ಟ್ರಾಕ್ಟರ್ ಗೆ ಬೈಕ್ ಡಿಕ್ಕಿ: ಇಬ್ಬರು ಸಾವು

7
ಸ್ನೇಹಿತನನ್ನು ರೈಲು ಹತ್ತಿಸಿ ಮರಳಿ ಬರುವಾಗ ದುರ್ಘಟನೆ

ಟ್ರಾಕ್ಟರ್ ಗೆ ಬೈಕ್ ಡಿಕ್ಕಿ: ಇಬ್ಬರು ಸಾವು

Published:
Updated:

ಬಾದಾಮಿ: ತಾಲ್ಲೂಕಿನ ನಂದಿಕೇಶ್ವರ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ನಿಂತ ಟ್ರಾಕ್ಟರ್ ಗೆ ಮೋಟಾರ್ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಹುನಗುಂದ ತಾಲ್ಲೂಕಿನ ಗುಡೂರು ಗ್ರಾಮದ ಶಮೀರ್ ರಾಜೇಸಾಬ್ ಬಾಗವಾನ (19) ಮತ್ತು ಕುಶಾಲ ಹನುಮಂತ ಭಜಂತ್ರಿ (19) ಮೃತಪಟ್ಟವರು.

ಸ್ನೇಹಿತರೊಬ್ಬರನ್ನು ಬೆಂಗಳೂರಿಗೆ ಕಳುಹಿಸಲು ಗುಡೂರಿನಿಂದ ಮೂವರು ಮೋಟಾರ್ ಬೈಕಿನಲ್ಲಿ ಬಾದಾಮಿ ರೈಲು ನಿಲ್ದಾಣಕ್ಕೆ ಬಂದಿದ್ದರು. ಸೊಲ್ಲಾಪುರ–ಯಶವಂತಪುರ ಗೋಲಗುಂಬಜ್ ಎಕ್ಸ್‌ಪ್ರೆಸ್‌ಗೆ ಹತ್ತಿಸಿ ಗುಡೂರಿಗೆ ಮರಳುವಾಗ ಮಾರ್ಗ ಮಧ್ಯದಲ್ಲಿ ದುರ್ಘಟನೆ ಸಂಭವಿಸಿದೆ.

ನಿಲುಗಲ್ ಗ್ರಾಮದ ಟ್ರಾಕ್ಟರ್ ನಂದಿಕೇಶ್ವರ ಸಮೀಪ ಕಲ್ಲನ್ನು ಇಳಿಸುತ್ತಿರುವಾಗ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದರು. ಈ ಬಗ್ಗೆ ಹನುಮಂತ ಭಜಂತ್ರಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಬಾದಾಮಿ ಸರ್ಕಲ್ ಇನ್‌ಸ್ಪೆಕ್ಟರ್  ಕೆ.ಎಸ್. ಹಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.  

ರಾತ್ರಿ ಸಮಯದಲ್ಲಿ ಲಾರಿ, ಟ್ರಾಕ್ಟರ್ ಮೂಲಕ ಮರಳು ಮತ್ತು ಕಲ್ಲುಗಳನ್ನು ಅಕ್ರಮವಾಗಿ ಸಾಗಾಟ ಮಾಡಿದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಂದಿಕೇಶ್ವರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !