ದುಷ್ಕರ್ಮಿಗಳ ಹಲ್ಲೆ: ರೌಡಿಶೀಟರ್‌ ಸಾವು

7

ದುಷ್ಕರ್ಮಿಗಳ ಹಲ್ಲೆ: ರೌಡಿಶೀಟರ್‌ ಸಾವು

Published:
Updated:
Deccan Herald

ಶ್ರೀರಂಗಪಟ್ಟಣ: ತಾಲ್ಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಶನಿವಾರ ಕಾರಿನಲ್ಲಿ ಬಂದ ದುಷ್ಕರ್ಮಿಗಳು  ರೌಡಿಶೀಟರ್‌ ಮೇಲೆ ಹಲ್ಲೆ ನಡೆಸಿದರು. ತೀವ್ರವಾಗಿ ಗಾಯಗೊಂಡಿದ್ದ ರೌಡಿಶೀಟರ್‌ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.

ಬೆಂಗಳೂರಿನ ಅರಸಯ್ಯ (48) ಮೃತಪಟ್ಟ ರೌಡಿಶೀಟರ್‌. ಟಿ.ಎಂ.ಹೊಸೂರು ಗೇಟ್ ಬಳಿಯ ಮಹಾಕಾಳಿ ದೇವಾಲಯ ಟ್ರಸ್ಟ್ ಅಧ್ಯಕ್ಷರಾಗಿರುವ ಅರಸಯ್ಯ ಬೆಂಗಳೂರಿನಿಂದ ಶನಿವಾರ ದೇವಾಲಯಕ್ಕೆ ಬಂದಿದ್ದರು. ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ವಾಪಸ್‌ ಕಾರಿನಲ್ಲಿ ಹೊರಟರು. ಬೆಂಗಳೂರು ಕಡೆಯ ತಿರುವಿನಲ್ಲಿ ಸ್ಪಿಫ್ಟ್‌ ಕಾರೊಂದು ಅರಸಯ್ಯ ಅವರ ಇನ್ನೊವಾ ಕಾರಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಇನ್ನೊವಾ ಗದ್ದೆಗೆ ಇಳಿದಿದೆ.

ಏಳೆಂಟು ಮಂದಿ ದುಷ್ಕರ್ಮಿಗಳು ಅರಸಯ್ಯ ಅವರನ್ನು ಕಾರಿನಿಂದ ಹೊರಗೆ ಎಳೆದು ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಿ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದರು. ಅರಸಯ್ಯ ಅವರ ತಲೆ ಮತ್ತು ಕತ್ತಿನ ಭಾಗಕ್ಕೆ ತೀವ್ರ ಗಾಯಗಳಾದವು. ದೇವಾಲಯದಲ್ಲೇ ಇದ್ದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಕೊನೆಯುಸಿರೆಳೆದರು.

ಅರಸಯ್ಯ ಅವರ ಕಾರಿನ ಒಳಗೂ ಮಾರಕಾಸ್ತ್ರ ಕಂಡು ಬಂದಿವೆ. ಬೆಂಗಳೂರಿನ ರೌಡಿಶೀಟರ್ ಪಳನಿ ತಂಡ ಹಲ್ಲೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !