ಕಾಯಿಗೆ ಸಕಾಲಕ್ಕೆ ಚಿಕಿತ್ಸೆ ಪಡೆಯುವುದು ಸೂಕ್ತ

7
ಥೈರಾಯ್ಡ್ ತಜ್ಞ ಡಾ.ಕೆ.ಎಂ.ಪ್ರಸನ್ನ ಕುಮಾರ್ ಸಲಹೆ

ಕಾಯಿಗೆ ಸಕಾಲಕ್ಕೆ ಚಿಕಿತ್ಸೆ ಪಡೆಯುವುದು ಸೂಕ್ತ

Published:
Updated:
Deccan Herald

ಕೋಲಾರ: ‘ದೇಹದಲ್ಲಿ ಯಾವುದೇ ಕಾಯಿಲೆಯ ಲಕ್ಷಗಣಗಳು ಕಾಣಿಸಿಕೊಂಡಾಗ ವೈದ್ಯರ ಬಳಿ ಚಿಕಿತ್ಸೆಪಡೆದುಕೊಳ್ಳುವುದು ಸೂಕ್ತ’ ಎಂದು ಥೈರಾಯ್ಡ್‌ ತಜ್ಞ ಡಾ.ಕೆ.ಎಂ.ಪ್ರಸನ್ನ ಕುಮಾರ್ ಸಲಹೆ ನೀಡಿದರು.

ನಗರದಲ್ಲಿ ಕರ್ನಾಟಕ ಎಂಡೋಕ್ರೈನ್ ಸೊಸೈಟಿ ಮತ್ತು ರೋಟರಿ ಕ್ಲಬ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಧುಮೇಹ ಹಾಗೂ ಥೈರಾಯ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಮಧುಮೇಹ ಮತ್ತು ರಕ್ತದ ಒತ್ತಡದ ಕಾಯಿಲೆಗಳು ಸಾಮಾನ್ಯವಾಗಿದ್ದು, ಪ್ರಾರಂಭದಲ್ಲೇ ಚಿಕಿತ್ಸೆ ಪಡೆದು ನಿಯಂತ್ರಿಸಿಕೊಳ್ಳುವುದು ಉತ್ತಮ’ ಎಂದರು.

‘ಮಗು ಜನನದ ಮೂರು ದಿನದೊಳಗೆ ಥೈರಾಯ್ಡ್ ಕಾಣಿಸಿಕೊಳ್ಳಬಹುದು. ಇದರಿಂದ ಕೂಡಲೇ ಪರೀಕ್ಷೆ ಮಾಡಿಸಿ ಪ್ರಾರಂಭದ ಹಂತದಲ್ಲಿ ಚಿಕಿತ್ಸೆ ಕೊಡಿಸುವುದರಿಂದ ಬುದ್ದಿಮಾಂದ್ಯ ಹಾಗೂ ಇತರೆ ಕಾಯಿಲೆಗಳು ಎದುರಾಗುವುದನ್ನು ತಡೆಯಬಹುದು. ಮೂರು ತಿಂಗಳ ಗರ್ಭವಸ್ಥೆಯಲ್ಲಿಯೇ ಥೈರಾಯ್ಡ್ ಗ್ರಂಥಿ ಬೆಳೆಯಲು ಆರಂಭವಾಗುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಗರ್ಭೀಣಿಯರಿಗೆ ಪರೀಕ್ಷೆ ಮಾಡಿಸಿ ಚಿಕಿತ್ಸೆ ಕೊಡಿಸಬೇಕು’ ಎಂದು ಸಲಹೆ ನೀಡಿದರು.

‘ಥೈರಾಯ್ಡ್‌ನಿಂದ ತೂಕ ಕಡಿಮೆಯಾಗಿದೆ, ಕುದುಲು ಉದುರುವುದೆಲ್ಲಾ ಸುಳ್ಳು. ಥೈರಾಯ್ಡ್ ಪರೀಕ್ಷೆಗೆ ಫಲಿತಾಂಶವನ್ನು ಕೇವಲ ಅರ್ಧತಾಸಿನಲ್ಲಿ ಪಡೆದುಕೊಳ್ಳಬಹುದು. ₹ 1.50 ಮಾತ್ರೆಯಿಂದ ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು. ಈ ಕಾಯಿಲೆಯಿಂದ ಯಾರು ಅತಂಕಪಡಬೇಕಾಗಿಲ್ಲ’ ಎಂದು ಹೇಳಿದರು.

‘ಮುಖ ಊತ, ಕಾಲು ಊತ, ದೇಹ ಧೃಢಕಾರ ಹೊಂದುವುದು, ನಿದ್ರಹೀನತೆ, ಮಕ್ಕಳಾಗದೆ ಇರುವ ಲಕ್ಷಣಗಳು ಕಾಣಿಸಿಕೊಂಡಾಗ ಥೈರಾಯ್ಡ್ ಬರುತ್ತದೆ. ಪ್ರತಿಯೊಬ್ಬರು ವರ್ಷಕ್ಕೂಮ್ಮೆ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಕಾಯಿಲೆ ಕಾಣಿಸಿ ಕೊಳ್ಳುತ್ತಿದ್ದ ಸಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ’ ಎಂದು ಹೇಳಿದರು.

‘ಬದಲಾಗುತ್ತಿರುವ ಜೀವನ ಶೈಲಿಯಿಂದ ಮನುಷ್ಯ ಮಧುವೇಹ ಸೇರಿದಂತೆ ಇತರೆ ಗಂಭೀರ ಕಾಯಿಲೆಗಳ ಸಮಸ್ಯೆ ಎದುರಿಸುತ್ತಿದ್ದಾನೆ’ ಎಂದು ಮಧುಮೇಹ ತಜ್ಞ ಡಾ.ಸೋಮಶೇಖರ್ ರೆಡ್ಡಿ ಅಭಿಪ್ರಾಯಪಟ್ಟರು.

‘ಮನುಷ್ಯನ ಸಾಮಾರ್ಥ್ಯಕ್ಕಿಂತ ಹೆಚ್ಚಿನ ಒತ್ತಡ ಬಿದ್ದಾಗ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡದಿದ್ದರೆ ಕೆಲ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹ ಕಾಯಿಲೆಗೆ ಮಾತ್ರೆಗಳಿಗಿಂತ ಇನ್ಸೂಲಿನ್ ಹೆಚ್ಚು ತೆಗೆದುಕೊಳ್ಳಬೇಕಾಗುತ್ತದೆ’ ಎಂದರು.

‘ಮಧು ಮೇಹಕ್ಕೆ ಸಕ್ಕರೆ ಕಾಯಿಲೆ, ಶ್ರೀಮಂತರ ಕಾಯಿಲೆ ಎಂದು ಕರೆಯುತ್ತಿದ್ದರು. ಆದರೆ ಈಗ ಹುಟ್ಟು ಮಗುವಿನಲ್ಲೂ ಕಾಯಿಲೆ ಇರುವುದನ್ನು ಕಾಣಬಹುದಾಗಿದೆ. ಈ ಕಾಯಿಲೆಯ ಲಕ್ಷಣಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಅಸಮತೋಲನ, ವಿವಿಧ ರೂಪದಲ್ಲಿ ಕಂಡುಬರುತ್ತದೆ’ ಎಂದು ವಿವರಿಸಿದರು.

‘ಮಧುಮೇಹವನ್ನು ಕೇವಲ ಔಷಧಿ, ಮಾತ್ರೆಗಳಿಂದ ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಕೊಳ್ಳಲು ಯೋಗ, ವ್ಯಾಯಮ, ಮೂಲಕ ಮಾನಸಿಕ ಸಮತೋಲನ ಕಾಪಾಡಬೇಕು, ದೈಹಿಕವಾಗಿ ಆಹಾರ ಶೈಲಿ ಬದಲಾವಣೆ ಮಾಡಿಕೊಳ್ಳಬೇಕು. ವೈದ್ಯರು ಶಿಫಾರಸ್ಸು ಮಾಡಿದ ಔಷಧಿಗಳನ್ನು ಸೇವಿಸುವುದು ಉತ್ತಮ’ ಎಂದು ತಿಳಿಸಿದರು.

‘ಭಾತರದಲ್ಲಿ ಶೇ12.5 ರಷ್ಟು ಮಧು ಮೇಹಿಗಳಿದ್ದಾರೆ. ತಂದೆ ತಾಯಿ ಇಬ್ಬರಿಗೂ ಮಧು ಮೇಹ ಇದ್ದರೆ ಶೇ.80 ರಷ್ಟು ಮಕ್ಕಳಿಗೆ ಈ ಕಾಯಿಲೆ ಬರುತ್ತದೆ’ ಎಂದರು.

ವೈದ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ವೈದ್ಯ ಡಾ.ಸಂಜಯ್ ರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನಾಗನಂದಕೆಂಪರಾಜ್, ಮಾವು ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಎಲ್.ಗೋಪಾಲ್ ಕೃಷ್ಣ, ರೋಟರಿ ಕ್ಲಬ್ ಅಧ್ಯಕ್ಷ ಶಂಕರೆಡ್ಡಿ, ಲಯನ್ಸ್ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಎ.ಅನಂತಪ್ಪ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !