ಸಂವಿಧಾನದ ಪ್ರತಿಗೆ ಬೆಂಕಿ: ಪ್ರಗತಿಪರ ಸಂಘಟನೆಗಳಿಂದ ಧರಣಿ

7
ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ: ರಸ್ತೆ ತಡೆ

ಸಂವಿಧಾನದ ಪ್ರತಿಗೆ ಬೆಂಕಿ: ಪ್ರಗತಿಪರ ಸಂಘಟನೆಗಳಿಂದ ಧರಣಿ

Published:
Updated:
Deccan Herald

ಕೋಲಾರ: ದೆಹಲಿಯಲ್ಲಿ ಸಂವಿಧಾನದ ಪ್ರತಿಗೆ ಬೆಂಕಿ ಹಚ್ಚಿ ಅಂಬೇಡ್ಕರ್ ವಿರುದ್ಧ ಘೋಷಣೆ ಕೂಗಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ಇಲ್ಲಿ ಭಾನುವಾರ ರಸ್ತೆ ತಡೆ ಮಾಡಿ ಧರಣಿ ನಡೆಸಿದರು.

ಸಿಪಿಎಂ ಜಿಲ್ಲಾ ಘಟಕದ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ‘ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ದೇಶದ ಸಂವಿಧಾನವನ್ನು ಯೂತ್ ಫಾರ್ ಇಕ್ವಾಲಿಟಿ ಸಂಘಟನೆಯವರು ಹಾಡಹಗಲೇ ಸುಟ್ಟಿ ಹಾಆಕುವ ಮೂಲಕ ಹೇಯ ಕೃತ್ಯವೆಸಗಿದ್ದಾರೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ದೇಶದ ಅಭಿವೃದ್ಧಿಗೆ ಹಾಗೂ ಪ್ರತಿಯೊಬ್ಬರಿಗೂ ಸಮಾನದ ಹಕ್ಕು ಸಿಗಬೇಕು ಎಂದು ಸಂವಿಧಾನ ರಚಿಸಿಕೊಟ್ಟಿರುವ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಸುಟ್ಟುಹಾಕಿರುವುದಲ್ಲದೆ ಮೀಸಲಾತಿ ವಿರೋಧಿ ಘೋಷಣೆ ಕೂಗಿದ್ದಾರೆ. ಸಂವಿಧಾನವನ್ನು ರದ್ದುಪಡಿಸಿ ಮನುವಾದವನ್ನು ಜಾರಿ ಮಾಡಬೇಕು ಎಂದು ಕಿಡಿಗೇಡಿಗಳು ಘೋಷಣೆ ಕೂಗುತ್ತಿದ್ದರು ಪೊಲೀಸರು ಅವರನ್ನು ಬಂಧಿಸದೆ ನಿರ್ಲಕ್ಷ ತೋರಿದ್ದಾರೆ’ ಎಂದು ಆರೋಪಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಒಂದಾಲ್ಲ, ಒಂದು ರೀತಿ ದಲಿತರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿದ್ದು, ರಕ್ಷಣ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ’ ಎಂದು ದಲಿತ ಸಂಘರ್ಷ ಸಮಿತಿ ಸದಸ್ಯ ರಾಜಪ್ಪ ದೂರಿದರು.

‘ಸಂವಿಧಾನದ ಪ್ರತಿ ಸುಟ್ಟಿರುವ ವಿಕೃತ ವಿಡಿಯೋವವನ್ನು ಜಾಲ ತಾಣಗಳಲ್ಲಿ ಹರಿ ಬಿಟ್ಟು ಸಮುದಾಯಗಳ ನಡುವೆ ಸಂಘರ್ಷಕ್ಕೆ ಅವಕಾಶ ಮಡುತ್ತಿದ್ದಾರೆ. ಅಂಬೇಡ್ಕರ್ ಸಿದ್ದಾಂತಗಳನ್ನು ಕಡೆಗಣಿಸಿ ಮನು ಸಿದ್ದಾಂತಗಳನ್ನು ಜಾರಿಗೊಳಿಸಲು ಹೊರಟಿದ್ದಾರೆ. ಇದನ್ನೆಲ್ಲಾ ಕೇಂದ್ರ ಸರ್ಕಾರ ಮಾಡಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿಯ ಶಾಸಕರು, ಸಚಿವರು ಸಂವಿಧಾನ ಬದಲಿಸುವ ಬಗ್ಗೆ, ಮೀಸಲಾತಿ ವಿರೋಧಿಸಿ ಮಹಿಳೆಯರು, ದಲಿತ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಸಂಘ ಪರಿವಾರದ ಕುಮ್ಮಕ್ಕಿನಿಂದ ಯೂತ್‌ಫಾರ್ ಇಕ್ವಾಲಿಟಿ ಸಂಘಟನೆಯವರು ಇಂತಹ ದುಷ್ಕೃತ್ಯ ಎಸಗಿದ್ದಾರೆ. ಈ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಕೆಪಿಆರ್‌ಎಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ, ಸಿಪಿಐಎಂನ ಮುಖಂಡರಾದ ಪಿ.ವೆಂಕಟರಮಣಪ್ಪ, ವಿಜಯಕೃಷ್ಣ, ಕೃಷ್ಣೇಗೌಡ, ಎನ್.ಎನ್.ಶ್ರೀರಾಮ್, ಅನಿಲ್‌ಕುಮಾರ್, ಮುನಿರಾಜು, ವೆಂಕಟೇಶ್, ಡಿ. ಮುನೇಶ್ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !