ಸಂಚಾರ ನಿಯಮ ಉಲ್ಲಂಘನೆ, ದಂಡ

7
ಮುಜುಗರದಿಂದ ಕಾಲ್ಕಿತ್ತ ಆಟೊದಲ್ಲಿದ್ದ ಮೂರು ಮಹಿಳಾ ಕಾನ್‌ಸ್ಟೆಬಲ್‌ಗಳು

ಸಂಚಾರ ನಿಯಮ ಉಲ್ಲಂಘನೆ, ದಂಡ

Published:
Updated:
Deccan Herald

ಚಿಕ್ಕಬಳ್ಳಾಪುರ: ಮೂರು ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಹತ್ತಿಸಿಕೊಂಡು ಎಂ.ಜಿ.ರಸ್ತೆಯಲ್ಲಿ ಇತ್ತೀಚೆಗೆ ಸಂಚಾರ ನಿಯಮ ಉಲ್ಲಂಘಿಸಿ ಆಟೊ ಚಲಾಯಿಸಿದ ಚಾಲಕನಿಗೆ ಸಂಚಾರ ಪೊಲೀಸರು ದಂಡ ವಿಧಿಸಿದರು.

ಮಹಿಳಾ ಪೊಲೀಸ್ ಠಾಣೆ ಬಳಿಯಿಂದ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಅಂಬೇಡ್ಕರ್ ವೃತ್ತದತ್ತ ಕರೆದುಕೊಂಡ ಬಂದ ಆಟೊ ಚಾಲಕ ಸಾದಿಕ್ ಖಾಸಗಿ ಬಸ್ ನಿಲ್ದಾಣದ ಸಮೀಪ ಸಂಚಾರ ನಿಯಮ ಉಲ್ಲಂಘಿಸಿದರು.

ಏಕಮುಖ ಸಂಚಾರ ವ್ಯವಸ್ಥೆ ಇರುವ ಎಂ.ಜಿ.ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಅಂಬೇಡ್ಕರ್ ವೃತ್ತದತ್ತ ಸಾಗುತ್ತಿದ್ದ ವೇಳೆ ಸಂಚಾರ ಪೊಲೀಸರು ಆಟೊ ತಡೆದು ದಂಡ ವಿಧಿಸಿದರು. ಈ ವೇಳೆ ಸ್ಥಳದಲ್ಲಿ ಸಾರ್ವಜನಿಕರು ಸೇರುತ್ತಿದ್ದಂತೆ ಮುಜುಗರಕ್ಕೆ ಒಳಗಾದ ಮೂರು ಮಹಿಳಾ ಕಾನ್‌ಸ್ಟೆಬಲ್‌ಗಳು ಅಲ್ಲಿಂದ ಕಾಲ್ಕಿತ್ತರು.

ನಾಲ್ಕು ಚಾಲಕರಿಗೆ ದಂಡ
ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಕಬ್ಬಿಣದ ಕಂಬಿಗಳನ್ನು ಸಾಗುತ್ತಿದ್ದ ಆಟೊಗಳನ್ನು ಪತ್ತೆ ಮಾಡಿದ ಸಂಚಾರ ಪೊಲೀಸರು ನಾಲ್ಕು ಆಟೊಗಳ ಚಾಲಕರಿಗೆ ದಂಡ ವಿಧಿಸಿದರು.

ಈ ವೇಳೆ ಮಾತನಾಡಿದ ಸಂಚಾರ ಠಾಣೆ ಎಎಸ್‌ಐ ವೇಣುಗೋಪಾಲ್, ‘ಆಟೊಗಳಲ್ಲಿ ಸರಕು ಸಾಗಣೆ ಮಾಡುವುದು ಕಾನೂನು ಉಲ್ಲಂಘನೆಯಾಗುತ್ತದೆ. ಇದು ಇತರೆ ಸವಾರರಿಗೆ ಕಂಟಕವಾದ್ದರಿಂದ ಆಟೊ ಚಾಲಕರು ಇಂತಹ ಕೆಲಸ ಮಾಡಬಾರದು. ಪ್ರಯಾಣಿಕರನ್ನು ಕರೆದ್ಯೊಯಲು ಮಾತ್ರ ಆಟೊ ಬಳಕೆ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !