ನಗರದಲ್ಲೂ ಮಳೆಯ ಅಬ್ಬರ

7
ಕುಳಾಯಿಯಲ್ಲಿ ಮನೆಗೆ ನುಗ್ಗಿದ ನೀರು

ನಗರದಲ್ಲೂ ಮಳೆಯ ಅಬ್ಬರ

Published:
Updated:
Deccan Herald

ಮಂಗಳೂರು: ನಗರದಲ್ಲೂ ಮಂಗಳವಾರ ಮಳೆಯ ಆರ್ಭಟ ಜೋರಾಗಿತ್ತು. ಸುರತ್ಕಲ್‌ನ ಕುಳಾಯಿಯಲ್ಲಿ ತಗ್ಗು ಪ್ರದೇಶದ ಮನೆಯೊಂದಕ್ಕೆ ನೀರು ನುಗ್ಗಿದೆ.

ಕೋಡಿಕ್ಕಲ್‌ನಲ್ಲಿ ಗಾಳಿ, ಮಳೆಗೆ ಬೃಹದಾಕಾರದ ಮರವೊಂದು ಮನೆಯ ಮೇಲೆ ಉರುಳಿಬಿದ್ದಿದೆ. ಕೊಡಿಯಾಲ್‌ ಗುತ್ತು, ಕಂಕನಾಡಿ ಬೈಪಾಸ್‌, ಸಿಟಿ ಆಸ್ಪತ್ರೆ ಸಮೀಪ, ಕೂಳೂರು, ಮಹಾಕಾಳಿಪಡ್ಪು, ಮಣ್ಣಗುಡ್ಡೆ, ದೇರೆಬೈಲ್‌, ಪ್ರಶಾಂತನಗರ ಸೇರಿದಂತೆ ಹಲವೆಡೆ ಮರಗಳ ರೆಂಬೆಗಳು ಮುರಿದುಬಿದ್ದಿವೆ.

ನಗರದ ತಗ್ಗು ಪ್ರದೇಶಗಳಲ್ಲಿ ಕಾಲುವೆಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಆದರೆ, ಬಹುತೇಕ ಕಡೆಗಳಲ್ಲಿ ಮಹಾನಗರ ಪಾಲಿಕೆ ಕಾರ್ಯಾಚರಣೆ ವೇಳೆ ತಡೆಗಳನ್ನು ತೆರವುಗೊಳಿಸಿರುವುದರಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿಲ್ಲ. ಪಂಜಿಮೊಗರು ಸೇರಿದಂತೆ ಕೆಲವು ಕಡೆಗಳಲ್ಲಿ ಮಾತ್ರ ಸಣ್ಣ ಪ್ರಮಾಣದಲ್ಲಿ ಪ್ರವಾಹ ಸ್ಥಿತಿ ಇತ್ತು.

ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 107.1 ಮಿಲಿ ಮೀಟರ್ ಮಳೆ ಬಿದ್ದಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ 151.9 ಮಿ.ಮೀ., ಪುತ್ತೂರು ತಾಲ್ಲೂಕಿನಲ್ಲಿ 116.1 ಮಿ.ಮೀ., ಸುಳ್ಯ ತಾಲ್ಲೂಕಿನಲ್ಲಿ 108.9 ಮಿ.ಮೀ., ಬಂಟ್ವಾಳ ತಾಲ್ಲೂಕಿನಲ್ಲಿ 88.8 ಮಿ.ಮೀ. ಮತ್ತು ಮಂಗಳೂರಿನಲ್ಲಿ 69.6 ಮಿ.ಮೀ. ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !