ಜಗತ್ತಿನ 20 ಸಾಂಸ್ಕೃತಿಕ ಕೇಂದ್ರಗಳಿಗೆ ವಿವೇಕಾನಂದರ ಹೆಸರು

7

ಜಗತ್ತಿನ 20 ಸಾಂಸ್ಕೃತಿಕ ಕೇಂದ್ರಗಳಿಗೆ ವಿವೇಕಾನಂದರ ಹೆಸರು

Published:
Updated:

ಬೀಜಿಂಗ್‌: ಜಗತ್ತಿನ 20 ಸಾಂಸ್ಕೃತಿಕ ಕೇಂದ್ರಗಳಿಗೆ ಸ್ವಾಮಿ ವಿವೇಕಾನಂದ ಅವರ ಹೆಸರು ಇಡಲಾಗುವುದು ಎಂದು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್‌) ತಿಳಿಸಿದೆ. 

ಯೋಜನೆಯ ಭಾಗವಾಗಿ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಬೀಜಿಂಗ್‌ನಲ್ಲಿರುವ ಭಾರತ ರಾಯಭಾರ ಕಚೇರಿಯಲ್ಲಿ ಸಾಂಸ್ಕೃತಿಕ ಕೇಂದ್ರಕ್ಕೆ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ (ಎಸ್‌ವಿಸಿಸಿ) ಎಂದು ಮರುನಾಮಕರಣ ಮಾಡಲಾಯಿತು. 

ಈ ಕೇಂದ್ರದಲ್ಲಿ ಉಚಿತವಾಗಿ ಯೋಗ, ಶಾಸ್ತ್ರೀಯ ಸಂಗೀತ, ನೃತ್ಯ ಹೇಳಿಕೊಡಲಾಗುತ್ತದೆ. 

‘ಭಾರತದ ಗುರುತನ್ನು ವಿವೇಕಾನಂದ ಅವರು ಸಮರ್ಥವಾಗಿ ನಿರೂಪಿಸಿದರು. ಭಾರತದ ಆಲೋಚನೆಯ ಸಂಕೇತ ಅವರು. ಸಾಂಸ್ಕೃತಿಕ ಕೇಂದ್ರಗಳಿಗೆ ವಿವೇಕಾನಂದರ ಹೆಸರು ಇಟ್ಟಿರುವುದು, ಭಾರತದ ದೃಷ್ಟಿಕೋನವನ್ನು ಅರ್ಥೈಸಿಕೊಳ್ಳಲು ಮಹತ್ವದ ಹೆಜ್ಜೆಯಾಗಲಿದೆ’ ಎಂದು ಐಸಿಸಿಆರ್‌ ಅಧ್ಯಕ್ಷ ವಿನಯ್ ಸಹಸ್ರಬುದ್ಧ ತಿಳಿಸಿದರು. 

‘ವಿಶ್ವದಾದ್ಯಂತ ಇರುವ 37 ಸಾಂಸ್ಕೃತಿಕ ಕೇಂದ್ರಗಳಲ್ಲಿ 20 ರಿಂದ 25 ಕೇಂದ್ರಗಳಿಗೆ ಎಸ್‌ವಿಸಿಸಿ ಎಂದು ಮರುನಾಮಕರಣ ಮಾಡಲಾಗುವುದು’ ಎಂದರು. 

 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !