ನ್ಯೂಜಿಲೆಂಡ್‌: ವಿದೇಶಿಗರಿಗೆ ಮನೆ ಖರೀದಿ ನಿಷೇಧ

7

ನ್ಯೂಜಿಲೆಂಡ್‌: ವಿದೇಶಿಗರಿಗೆ ಮನೆ ಖರೀದಿ ನಿಷೇಧ

Published:
Updated:

ವೆಲ್ಲಿಂಗ್ಟನ್‌: ಗಗನಕ್ಕೇರುತ್ತಿರುವ ವಸತಿ ಬೆಲೆಗಳಿಗೆ ಕಡಿವಾಣ ಹಾಕುವ ಸಲುವಾಗಿ ವಿದೇಶಿಯರು ಮನೆ ಖರೀದಿಸುವುದನ್ನು ನ್ಯೂಜಿಲೆಂಡ್‌ ಸರ್ಕಾರ ನಿಷೇಧಿಸಿದೆ.  

ಸ್ಥಳೀಯರಿಗೆ ಕೈಗೆಟುಕುವ ದರದಲ್ಲಿ ಮನೆ ಒದಗಿಸುವ ಜೊತೆಗೆ ಸ್ಥಳೀಯರಿಗೆ ವಸತಿ ಮಾಲೀಕತ್ವದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮಕೈಗೊಂಡಿದೆ.

ಇದಕ್ಕಾಗಿ ಸರ್ಕಾರ ಕಾನೂನು ರೂಪಿಸಿದೆ. ಈ ಹಿಂದೆ ವಸತಿ ಮಾರುಕಟ್ಟೆ ವಿಶ್ವದಾದ್ಯಂತ ಹೂಡಿಕೆದಾರರಿಗೆ ಮುಕ್ತವಾಗಿತ್ತು. ಈ ಹೊಸ ಕಾನೂನು ಸರ್ಕಾರದ ಚುನಾವಣಾ ಘೋಷಣೆಗಳಲ್ಲೊಂದು. ಈಗಾಗಲೇ ವಸತಿ ಹೊಂದಿರುವವರಿಗೆ ಈ ಕಾನೂನಿನಿಂದ ಯಾವುದೇ ಪರಿಣಾಮ ಆಗುವುದಿಲ್ಲ.

ಬರಹ ಇಷ್ಟವಾಯಿತೆ?

  • 4

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !