ಹಸು, ಎಮ್ಮೆಗೂ ಆಧಾರ್‌ ಮಾದರಿ ಸಂಖ್ಯೆ!

7

ಹಸು, ಎಮ್ಮೆಗೂ ಆಧಾರ್‌ ಮಾದರಿ ಸಂಖ್ಯೆ!

Published:
Updated:
Deccan Herald

ಮಂಡ್ಯ: ಹಸು, ಎಮ್ಮೆಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಪಶುಸಂಗೋಪನಾ ಇಲಾಖೆ ‘ಇನಾಫ್‌’ (ಐ.ಎನ್‌.ಎ.ಪಿ.ಎಚ್) ಕಾರ್ಯಕ್ರಮ ರೂಪಿಸಿದೆ. ಪ್ರಾಣಿಗಳ ಮಾಹಿತಿ ಸಂಗ್ರಹಿಸಲು ಆಧಾರ್‌ ಮಾದರಿಯಲ್ಲಿ ಗುರುತಿನ ಸಂಖ್ಯೆಯುಳ್ಳ ಓಲೆಯನ್ನು ಪ್ರಾಣಿಗಳ ಕಿವಿಗೆ ಅಳವಡಿಸುವ ಕಾರ್ಯ ಗುರುವಾರದಿಂದ ಆರಂಭವಾಗಿದೆ.

ಪ್ರಾಣಿಗಳ ಚಲನೆ, ಆರೋಗ್ಯ ಸ್ಥಿತಿ, ವಿಮೆ ಮುಂತಾದ ಸಂಪೂರ್ಣ ಮಾಹಿತಿ ಇಲಾಖೆಗೆ ಸಿಗಲಿದೆ. ಜಿಲ್ಲೆಯಲ್ಲಿ 3.5 ಲಕ್ಷ ಹಸು ಹಾಗೂ ಎಮ್ಮೆಗಳನ್ನು ಗುರುತಿಸಲಾಗಿದೆ. ಇಲಾಖೆಯಿಂದ ಪಶು ವೈದ್ಯರಿಗೆ ಟ್ಯಾಬ್‌ ನೀಡಲಾಗಿದ್ದು ಅವರು ಗುರುತಿನ ಸಂಖ್ಯೆ ನೀಡಿ ಪ್ರಾಣಿಗಳ ಕಿವಿಗೆ ಓಲೆ ಅಳವಡಿಸುತ್ತಿದ್ದಾರೆ. ಪ್ರತಿ ಪ್ರಾಣಿಗೆ 12 ಸಂಖ್ಯೆಯ ಗುರುತಿನ ಅಂಕಿ ನೀಡಲಾಗುತ್ತಿದೆ. ಆ ಪ್ರಾಣಿ ಎಲ್ಲೇ ಇದ್ದರೂ ಅದರ ಆರೋಗ್ಯ ಸ್ಥಿತಿ, ಕಾಡಿದ ರೋಗಗಳು, ನೀಡಲಾದ ಚಿಕಿತ್ಸೆಯ ಸಂಪೂರ್ಣ ಮಾಹಿತಿ ಇಲಾಖೆಯಲ್ಲಿರುವ ಸರ್ವರ್‌ನಲ್ಲಿ ದಾಖಲಾಗುತ್ತದೆ.

‘ಕಾಲುಬಾರಿ ರೋಗ ಸೇರಿ ವಿವಿಧ ರೋಗಗಳನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಜಾನುವಾರುಗಳ ಮೇಲೆ ನಿಗಾ ವಹಿಸಲು ಇಲಾಖೆ ಆಧಾರ್‌ ಮಾದರಿಯಲ್ಲಿ ಸಂಖ್ಯೆ ನೀಡಿದೆ. ಹಸು, ಎಮ್ಮೆಗೆ ಮಾತ್ರ ಈ ಕಾರ್ಯಕ್ರಮ ರೂಪಿಸಲಾಗಿದೆ. ಎಲ್ಲಾ ಪಶುವೈದ್ಯರಿಗೆ ಇಲಾಖೆ ವತಿಯಿಂದ ತರಬೇತಿ ನೀಡಲಾಗಿದೆ. ಇದಕ್ಕೊಂದು ಆ್ಯಪ್‌ ಕೂಡ ರೂಪಿಸಲಾಗಿದ್ದು ಸಂಪೂರ್ಣ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ’ ಎಂದು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಪ್ರಕಾಶ್‌ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !