ಅಡ್ವಾಣಿಗೆ ಜೀವದ ಗೆಳೆಯನ ಅಗಲಿಕೆ ನೋವು

7

ಅಡ್ವಾಣಿಗೆ ಜೀವದ ಗೆಳೆಯನ ಅಗಲಿಕೆ ನೋವು

Published:
Updated:

ನವದೆಹಲಿ: ಭಾರತೀಯ ಜನತಾ ಪಕ್ಷವನ್ನು ರಾಜಕೀಯದಲ್ಲಿ ಮುಂಚೂಣಿ ಸ್ಥಾನಕ್ಕೆ ತರುವಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಎಲ್‌.ಕೆ. ಅಡ್ವಾಣಿ ಜೋಡಿಯ ಶ್ರಮ ಅಪಾರ.

‍ಪಕ್ಷ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಸಂಘಟನೆ ಮತ್ತು ನಾಯಕತ್ವಕ್ಕೆ ಹೆಸರುವಾಸಿಯಾಗಿತ್ತು ಈ ಜೋಡಿ. ಪಕ್ಷದ ಪ್ರತಿಯೊಂದು ಕಾರ್ಯಚಟುವಟಿಕೆಗಳಲ್ಲಿ ಕೈಜೋಡಿಸುತ್ತಿದ್ದ ತಮ್ಮ ಆಪ್ತಸ್ನೇಹಿತನ ಅಗಲಿಕೆ ಅಡ್ವಾಣಿ ಅವರಿಗೆ ಅಪಾರ ನೋವು ತಂದಿದೆ. ಸುಮಾರು 65 ವರ್ಷಗಳ ಒಡನಾಡಿ ದೂರವಾಗಿರುವುದು ಬೇಸರ ಮೂಡಿಸಿದೆ.

‘ಅಟಲ್‌ಜೀ ದೇಶದ ಮುತ್ಸದ್ದಿ ನಾಯಕರಾಗಿದ್ದರು. ಪರಮಾಪ್ತ ಸ್ನೇಹಿತನನ್ನು ಕಳೆದುಕೊಂಡಿರುವುದು ನೋವು ತಂದಿದೆ’ ಎಂದು ಅಡ್ವಾಣಿ ದುಃಖ ವ್ಯಕ್ತಪಡಿಸಿದ್ದಾರೆ.

‘ವಾಜಪೇಯಿ ಜತೆಗೆ ಸುದೀರ್ಘ ಅವಧಿಯ ಒಡನಾಟವಿತ್ತು. ಆರ್‌ಎಸ್‌ಎಸ್‌ನ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ ದಿನಗಳಿಂದಲೂ ನಮ್ಮ ಸ್ನೇಹ ಆರಂಭವಾಗಿತ್ತು. ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಎದುರಿಸಿದ ಸಂದರ್ಭಗಳು, ಬಳಿಕ ಜನತಾ ಪಕ್ಷ ಸ್ಥಾಪನೆ, ಅನಂತರ ಭಾರತೀಯ ಜನತಾ ಪಕ್ಷ ಸ್ಥಾಪನೆ – ಇವು ನಮ್ಮ ಪ್ರಮುಖ ಹೆಜ್ಜೆ ಗುರುತುಗಳು‌’ ಎಂದು ನೆನಪಿಸಿಕೊಂಡಿದ್ದಾರೆ.

‘ಕೇಂದ್ರದಲ್ಲಿ ಪ್ರಥಮ ಬಾರಿ ಕಾಂಗ್ರೆಸ್ಸೇತರ ಸ್ಥಿರವಾದ ಸರ್ಕಾರ ನೀಡಿದ ಕೀರ್ತಿ ಅಟಲ್‌ಜೀ ಅವರಿಗೆ ಸಲ್ಲುತ್ತದೆ. ಅವರ ಜತೆ ಉಪಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಹೆಮ್ಮೆಯೂ ನನಗಿದೆ. ನನ್ನ ಹಿರಿಯರಾಗಿ ಅಟಲ್‌ಜೀ ಅವರು ಪ್ರತಿಯೊಂದು ವಿಷಯದಲ್ಲಿ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುತ್ತಿದ್ದರು’ ಎಂದು ಸ್ಮರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 18

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !