ವೇಣೂರಿನಲ್ಲಿ ನಾಳೆ 8ನೇ ಶಾಖೆ ಆರಂಭ

7
ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘ

ವೇಣೂರಿನಲ್ಲಿ ನಾಳೆ 8ನೇ ಶಾಖೆ ಆರಂಭ

Published:
Updated:

ಬೆಳ್ತಂಗಡಿ : ‘ ಶ್ರೀ ಗುರದೇವ ವಿವಿಧೋದ್ದೇಶ ಸಹಕಾರ ಸಂಘದ 8ನೇ ಶಾಖೆಯ ಉದ್ಘಾಟನೆ ಇದೇ 19ರಂದು ವೇಣೂರು ಗಾರ್ಡನ್ ವ್ಯೂ ಸಭಾಂಗಣದಲ್ಲಿ ನಡೆಯಲಿದ್ದು, 26ರಂದು ವಾರ್ಷಿಕ ಮಹಾಸಭೆಯು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆಯಲಿದೆ’ ಎಂದು ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ ಹೇಳಿದರು.

 ಶುಕ್ರವಾರ ಬ್ಯಾಂಕಿನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿ ‘ ಪ್ರಸಕ್ತ ವರ್ಷ ಸಹಕಾರ ಸಂಘವು 10ನೇ ವರ್ಷದ ದಶಮಾನೋತ್ಸವವನ್ನು ನವೆಂಬರ್ ತಿಂಗಳಲ್ಲಿ ಆಚರಿಸಲಿದ್ದು ಆ ಸಂದರ್ಭದಲ್ಲಿ 10 ವರ್ಷಕ್ಕೆ 10 ಶಾಖೆಗಳನ್ನು ಹೊಂದುವ ಗುರಿ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಬೆಳ್ತಂಗಡಿ, ಶಿರ್ತಾಡಿ, ಕಲ್ಲಡ್ಕ, ಕಕ್ಕಿಂಜೆ, ಬೆಳುವಾಯಿ, ನೆಲ್ಯಾಡಿ ಮತ್ತು ಮುಡಿಪು ಒಟ್ಟು 7 ಶಾಖೆಗಳನ್ನು ಹೊಂದಿದ್ದು, ಮುಂದಕ್ಕೆ ವೇಣೂರು, ಉಪ್ಪಿನಂಗಡಿ ಮತ್ತು ಕಡಬದಲ್ಲಿ ಶಾಖೆಗಳು ಆರಂಭವಾಗಲಿದೆ. ದಶಮಾನೋತ್ಸವವ ಸಂದರ್ಭದಲ್ಲಿ ಬೆಳ್ತಂಗಡಿ ಪೇಟೆಯಲ್ಲಿ  ₹4 ಕೋಟಿ ವೆಚ್ಚದ ಕೇಂದ್ರ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯ ನಡೆಯಲಿದೆ ಎಂದರು.

ವೇಣೂರು ಶಾಖೆಯನ್ನು ಮಾಜಿ ಶಾಸಕ ವಸಂತ ಬಂಗೇರ ಉದ್ಘಾಟಿಸಲಿದ್ದು ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಭದ್ರತಾ ಕೋಶವನ್ನು ಉದ್ಘಾಟಿಸಲಿದ್ದು , ನಾರಾವಿ ಜಿ.ಪಂ ಸದಸ್ಯ ಧರಣೇಂದ್ರ ಕುಮಾರ್ ಗಣಕಯಂತ್ರದ ಉದ್ಘಾಟನೆ ಮಾಡಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ತಾನ ವೇಣೂರು ಇದರ ಆಡಳಿತ ಮೊಕ್ತೇಸರ ಜಯರಾಮ ಶೆಟ್ಟಿ ನಿರಖು ಸರ್ಟಿಫಿಕೇಟ್ ವಿತರಿಸಲಿದ್ದು , ತಾ.ಪಂ.ಸದಸ್ಯ ವಿಜಯ ಗೌಡ ನಿರಖು ಠೇವಣಿ ಅದೃಷ್ಠ ಚೀಟಿಯನ್ನು ಆಯ್ಕೆ ಮಾಡಲಿದ್ದಾರೆ. ವೇಣೂರು ಗ್ರಾ.ಪಂ ಅಧ್ಯಕ್ಷ ಮೋಹಿನಿ ವಿಶ್ವನಾಥ ಶೆಟ್ಟಿ ಉಳಿತಯ ಖಾತೆ ಅದೃಷ್ಟ ಚೀಟಿ ಆಯ್ಕೆ ಮಾಡಲಿದ್ದು ಅಥಿತಿಗಳಾಗಿ ವೇಣೂರು ಸಿ.ಎ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ, ಶ್ರೀ ಗು.ನಾ.ಸ್ವಾ.ಸೇ.ಸಂ. ವೇಣೂರು ಇದರ ಅಧ್ಯಕ್ಷ ಪೂವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ಪಡ್ಡಂದಡ್ಕ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಖಾಲಿದ್ ಪೂಜಬೆ, ಯುವವಾಹಿನಿ ವೇಣೂರು ಘಟಕ ಹಾಗೂ ವೇಣೂರು ಲಯನ್ಸ್ ಕ್ಲಬ್‍ನ ಅಧ್ಯಕ್ಷ ನಿತೀಶ್ ಹೆಚ್, ಉದ್ಯಮಿ ಭಾಸ್ಕರ ಪೈ, ಕಟ್ಟಡದ ಮಾಲಿಕ ಮಾರ್ಕ್ ಎಗ್ಬರ್ಟ್ ಪಿರೇರಾ ಭಾಗವಹಿಸುವರು ಎಂದು ತಿಳಿಸಿದರು.

ಸಂಘದ ಬೇರೆ ಬೇರೆ ಶಾಖೆಗಳಲ್ಲಿ ಈಗಾಗಲೇ 43 ಸಿಬ್ಬಂದಿ ಇದ್ದು, 45 ಠೇವಣಿ ಸಂಗ್ರಹಕರಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಪಡೆದುಕೊಂಡಿದ್ದು, ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಕಾರ್ಯವ್ಯಾಪ್ತಿಯನ್ನು ಹೊಂದಿದ ಸಂಸ್ಥೆಯಾಗಿದೆ. ಲೆಕ್ಕ ಪರಿಶೋಧನೆಯಲ್ಲಿ ‘ಎ’ದರ್ಜೆ ಹೊಂದಿದ್ದು, ಪಾನ್ ಕಾರ್ಡ್ ಸೌಲಭ್ಯ, ಸೇಫ್‌ ಲಾಕರ್ ಸೌಲಭ್ಯ, ಇಪ್ಕೋ – ಟೋಕಿಯೋ ವಿಮಾ ಸೌಲಭ್ಯ, ಕೆಎಂಸಿ ಹೆಲ್ತ್ ಕಾರ್ಡ್ ಮುಂತಾದ ಸೌಕರ್ಯಗಳಿವೆ ಎಂದರು.

ಉಪಾಧ್ಯಕ್ಷ ದಾಮೋದರ ಸಾಲಿಯಾನ್, ನಿರ್ದೇಶಕರಾದ ಭಗೀರಥ ಜಿ, ಶೇಖರ ಬಂಗೇರ, ಚಂದ್ರಶೇಖರ್, ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಇದ್ದರು.

ದತ್ತು: ಸಂಘವು ಬ್ಯಾಂಕಿಂಗ್ ಚಟುವಟಿಕೆ ಮಾತ್ರವಲ್ಲದೆ ‘ಕಲಿಕೆಗಾಗಿ ಸಹಾಯ ಸಹಾಯಕ್ಕಾಗಿ ಕಲಿಕೆ’ ಯೋಜನೆಯಡಿ ಕಳೆದ ವರ್ಷದಿಂದ ವರ್ಷಕ್ಕೊಬ್ಬ ವಿದ್ಯಾರ್ಥಿಯನ್ನು ದತ್ತು ಸ್ವೀಕಾರ ಮಾಡಿಕೊಂಡು ವಿದ್ಯಾಭ್ಯಾಸ ನೀಡುತ್ತಿದ್ದು, ಕಳೆದ ಅವಧಿಯಲ್ಲಿ  ಎಂಜಿನಿಯರಿಂಗ್ ವಿದ್ಯಾರ್ಥಿ ರಂಜಿತ್ ನನ್ನು ದತ್ತು ಪಡೆದಿದ್ದು, ಈ ಬಾರಿಯೂ ದತ್ತು ಸ್ವೀಕರಿಸಲಾಗುವುದು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !