ಆ.31ಕ್ಕೆ ಜಿಲ್ಲೆಯಲ್ಲಿ ಮಕ್ಕಳ ಚಲನಚಿತ್ರೋತ್ಸವ

7
ಮಕ್ಕಳ ಸುರಕ್ಷತೆ ಮುಖ್ಯ: ಜಿಲ್ಲಾಧಿಕಾರಿ ಮಂಜುನಾಥ್‌ ಸೂಚನೆ

ಆ.31ಕ್ಕೆ ಜಿಲ್ಲೆಯಲ್ಲಿ ಮಕ್ಕಳ ಚಲನಚಿತ್ರೋತ್ಸವ

Published:
Updated:
Deccan Herald

ಕೋಲಾರ: ‘ಶಾಲಾ ಮಕ್ಕಳಿಗೆ ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉಪಯುಕ್ತವಾದ ಚಲನಚಿತ್ರೋತ್ಸವ ಆಯೋಜಿಸಲಾಗಿದ್ದು, ಚಿತ್ರಗಳು ಪ್ರದರ್ಶನವಾಗಲಿರುವ ಚಿತ್ರಮಂದಿರಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸಿ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಮಕ್ಕಳ ಚಲನಚಿತ್ರೋತ್ಸವದ ಸಿದ್ಧತೆ ಸಂಬಂಧ ಇಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಮೂಲಸೌಕರ್ಯವಿಲ್ಲದ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶಿಸಬಾರದು. ಮಕ್ಕಳಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮವಾದ ಕಾರಣ ಸುರಕ್ಷತೆ ಬಹಳ ಮುಖ್ಯ’ ಎಂದು ಹೇಳಿದರು.

‘ಶಾಲೆಯಿಂದ ಚಿತ್ರಮಂದಿರಕ್ಕೆ ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವುದು ಮತ್ತು ಚಿತ್ರಪ್ರದರ್ಶನ ಪೂರ್ಣಗೊಂಡ ಬಳಿಕ ಶಾಲೆಗೆ ಕರೆದೊಯ್ಯುವುದು ಶಿಕ್ಷಕರ ಜವಾಬ್ದಾರಿ. ಚಲನಚಿತ್ರೋತ್ಸವದ ಬಗ್ಗೆ ಒಂದು ದಿನ ಮುಂಚಿತವಾಗಿ ಪೋಷಕರಿಗೆ ಮಾಹಿತಿ ನೀಡಬೇಕು. ಮಕ್ಕಳಿಗೆ ಏನೇ ಸಮಸ್ಯೆಯಾದರೂ ಶಿಕ್ಷಕರೇ ಜವಾಬ್ದಾರರು’ ಎಂದು ಎಚ್ಚರಿಕೆ ನೀಡಿದರು.

₹ 15 ದರ: ‘ಜಿಲ್ಲೆಯಲ್ಲಿ ಆ.31ರಿಂದ ಸೆ.6ರವರೆಗೆ ಮಕ್ಕಳ ಚಲನಚಿತ್ರೋತ್ಸವ ನಡೆಯಲಿದ್ದು, ಸ್ಯಾಟಲೈಟ್ ಮೂಲಕ ಚಿತ್ರಗಳು ಪ್ರದರ್ಶನಗೊಳ್ಳಲಿವೆ’ ಎಂದು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆ ವ್ಯವಸ್ಥಾಪಕ ಎಸ್.ರಮೇಶ್ ವಿವರಿಸಿದರು.

‘ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದ ಮಕ್ಕಳು ಪಾಲ್ಗೊಳ್ಳಬಹುದು. ಪ್ರತಿ ವಿದ್ಯಾರ್ಥಿಗೆ ₹ 15 ದರದಲ್ಲಿ ಟಿಕೆಟ್‌ ನೀಡಲಾಗುವುದು. ಶಿಕ್ಷಕರಿಗೆ ಉಚಿತ ಪ್ರವೇಶವಿರುತ್ತದೆ. ಬೆಳಿಗ್ಗೆ 8ರಿಂದ 10 ಗಂಟೆವರೆಗೆ ಪ್ರದರ್ಶನವಿರುತ್ತದೆ. ಚಿತ್ರೋತ್ಸವ ಕುರಿತು ಈಗಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳ ಮೂಲಕ ಶಾಲೆಗಳಿಗೆ ಮಾಹಿತಿ ತಲುಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸೆ.2 ಭಾನುವಾರ ಮತ್ತು ಸೆ.5ರಂದು ಶಿಕ್ಷಕರ ದಿನಾಚರಣೆ ಇರುವುದರಿಂದ ಚಿತ್ರೋತ್ಸವದ ದಿನಾಂಕ ಬದಲಿಸುವಂತೆ ಕೆಲ ಜಿಲ್ಲೆಗಳ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಆದರೆ, ಸ್ಯಾಟಲೈಟ್ ಮೂಲಕ ಚಿತ್ರ ಪ್ರದರ್ಶನ ನಡೆಯುವುದರಿಂದ ಬದಲಿ ದಿನಾಂಕದ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತರೇ ನಿರ್ಧಾರ ತೆಗೆದುಕೊಳ್ಳಬೇಕು. ಚಿತ್ರೋತ್ಸವಕ್ಕೆ ಗುರುತಿಸಿರುವ ಚಿತ್ರಮಂದಿರಗಳ ಪಟ್ಟಿಯನ್ನು ಅನುಮೋದಿಸಬೇಕು’ ಎಂದರು.

ಪ್ರಗತಿಗೆ ಪೂರಕ: ‘ಸಮಸ್ಯೆ ಇಲ್ಲದ ಚಿತ್ರಮಂದಿರದಲ್ಲಿ ಚಿತ್ರೋತ್ಸವ ನಡೆಸಿ. ಸೆ.2 ಮತ್ತು ಸೆ.5ರಂದು ನಡೆಯಬೇಕಿದ್ದ ಪ್ರದರ್ಶನದ ದಿನಾಂಕ ಬದಲಿಸಿ ಸೆ.6 ಮತ್ತು 7ಕ್ಕೆ ವ್ಯವಸ್ಥೆ ಮಾಡಿ. ಚಲನಚಿತ್ರಗಳು ಮಕ್ಕಳನ್ನು ಪ್ರೋತ್ಸಾಹಿಸುವಂತೆ ಹಾಗೂ ಮನರಂಜಿಸುವಂತೆ ಇರಬೇಕು. ಜತೆಗೆ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.

ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಬಿ.ಎಸ್‌.ಲೋಕೇಶ್, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆ ವ್ಯವಸ್ಥಾಪಕ ಅವಿನಾಶ್ ಹಾಜರಿದ್ದರು.

* 13 ಚಿತ್ರಮಂದಿರಗಳಲ್ಲಿ ಮಕ್ಕಳ ಚಿತ್ರೋತ್ಸವ
* ₹ 15 ಪ್ರತಿ ವಿದ್ಯಾರ್ಥಿಗೆ ಟಿಕೆಟ್‌ ದರ
* 8 ಚಿತ್ರಗಳು ಯುಎಫ್‌್ಒ ತಾಂತ್ರಿಕತೆಯಲ್ಲಿ ಪ್ರದರ್ಶನ 
* 6 ಚಿತ್ರಗಳು ಕ್ಯೂಬ್ ತಾಂತ್ರಿಕತೆಯಲ್ಲಿ ಪ್ರದರ್ಶನ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !