ಸಾರ್ವಜನಿಕ ಶೌಚಾಲಯಕ್ಕೆ ಬೀಗದ ಭಾಗ್ಯ!

7
ಕಟ್ಟಿ ನಾಲ್ಕು ತಿಂಗಳಾದರೂ ನಗರಸಭೆ ನೀರಿನ ವ್ಯವಸ್ಥೆ ಮಾಡಿಲ್ಲ

ಸಾರ್ವಜನಿಕ ಶೌಚಾಲಯಕ್ಕೆ ಬೀಗದ ಭಾಗ್ಯ!

Published:
Updated:
Deccan Herald

ಬಾಗಲಕೋಟೆ: ಕಟ್ಟಿ ನಾಲ್ಕು ತಿಂಗಳಾದರೂ ನೀರಿನ ವ್ಯವಸ್ಥೆ ಮಾಡದ ಕಾರಣ ಬಾಗಲಕೋಟೆಯ 81 ಸಮೂಹ ಶೌಚಾಲಯಗಳು ಹಾಳು ಬಿದ್ದಿವೆ. ನಗರಾಡಳಿತದ ಬಯಲು ಬಹಿರ್ದೆಸೆ ಮುಕ್ತ ನಗರದ ಕನಸನ್ನು ಅಣಕಿಸುವಂತೆ ತೋರುತ್ತಿವೆ. 

ಇಲ್ಲಿನ ಕಿಲ್ಲಾದ ಕೊತ್ತಲೇಶ್ವರ ಗುಡಿಗೆ ತೆರಳುವ ರಸ್ತೆಯ ಗ್ರಾಮ ಚಾವಡಿ ಬಳಿ ಮೂರು ಗುಂಪುಗಳಲ್ಲಿ ಈ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗ ಇಲ್ಲದ ಕುಟುಂಬಗಳ ನೆರವಿಗಾಗಿ ಸ್ವಚ್ಛ ಭಾರತ ಯೋಜನೆಯಡಿ ನಗರಸಭೆಯಿಂದ ಈ ಗುಂಪು ಪಾಯಖಾನೆಗಳನ್ನು ಕಟ್ಟಿಕೊಡಲಾಗಿದೆ. ಆದರೆ ಅವುಗಳಿಗೆ ನೀರಿನ ವ್ಯವಸ್ಥೆ  ಮಾಡಿಲ್ಲ. ಶೌಚಾಲಯ ಸಮುಚ್ಛಯದ ಸಮೀಪದಲ್ಲಿಯೇ ಕೊಳವೆ ಬಾವಿ ಇದ್ದು, ಅಲ್ಲಿಂದ ಪೈಪ್‌ಲೈನ್ ಹಾಕಿ ನೀರು ಪೂರೈಕೆ ಮಾಡಬೇಕಿದೆ. ಜೊತೆಗೆ ಮೆಟ್ಟಿಲುಗಳನ್ನು ಮಾಡಬೇಕಿದೆ.

ನಗರಸಭೆಯ ಯೋಜನೆಯಂತೆ ಪ್ರತಿ ಎರಡು ಕುಟುಂಬಗಳು ತಲಾ ಒಂದು ಶೌಚಾಲಯವನ್ನು ಬಳಕೆ ಮಾಡಿಕೊಳ್ಳಬೇಕಿದೆ. ಇವುಗಳ ಬಳಕೆ ಆರಂಭವಾದರೆ ಸುತ್ತಲಿನ ಪ್ರದೇಶದಲ್ಲಿ ಬಯಲು ಬಹಿರ್ದೆಸೆಗೆ ಕಡಿವಾಣ ಬಿದ್ದು, ಅಲ್ಲಿಯೇ ಪಕ್ಕದ ಘಟಪ್ರಭಾ ನದಿ ಮಲಿನಗೊಳ್ಳುವುದು ತಪ್ಪುತ್ತದೆ ಎಂಬುದು ಗುಂಪು ಶೌಚಾಲಯಗಳನ್ನು ಅಲ್ಲಿ ಕಟ್ಟಿರುವುದರ ಹಿಂದಿನ ಉದ್ದೇಶವೂ ಆಗಿದೆ.

’ಶೌಚಾಲಯ ಕಟ್ಟಿದ ಮೇಲೆ ಫಲಾನುಭವಿಗಳನ್ನು ನಿಲ್ಲಿಸಿ ಫೋಟೊ ಕೂಡ ತೆಗೆಯಲಾಗಿದೆ. ಹೆಸರಿಗೆ ಮಾತ್ರ ಹಸ್ತಾಂತರ ಮಾಡಲಾಗಿದೆ. ಆದರೆ ನೀರಿಲ್ಲದೇ ಅವುಗಳ ಬಳಕೆಯೂ ಆಗುತ್ತಿಲ್ಲ. ಕೀಲಿ ಕೈ ಗುತ್ತಿಗೆದಾರರ ಬಳಿಯೇ ಇದೆ’ ಎಂದು ಸ್ಥಳೀಯರಾದ ಮುರಾದ್ ಖಾನ್ ಹೇಳುತ್ತಾರೆ. 

ತಿಳಿವಳಿಕೆ ಮೂಡಿಸಬೇಕಿದೆ: ’ಶೌಚಾಲಯ ಕಟ್ಟಿಕೊಟ್ಟರೂ ಇನ್ನೂ ಬಯಲು ಬಹಿರ್ದೆಸೆಯ ಬಗ್ಗೆ ಹೆಚ್ಚಿನವರು ಒಲವು ಇಟ್ಟುಕೊಂಡಿದ್ದಾರೆ. ಹಾಗಾಗಿ ಶೌಚಾಲಯ ಕಟ್ಟಡಗಳು ಖಾಲಿ ಬಿದ್ದು, ಕಟ್ಟಿಗೆ ಇಡಲು ಬಳಕೆಯಾಗುತ್ತಿವೆ. ಹಾಗಾಗಿ ಅಧಿಕಾರಿಗಳು ಮೊದಲು ಅವುಗಳ ಬಳಕೆಯ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

ಬೇರೆ ಟೆಂಡರ್ ನೀಡಲಾಗಿದೆ:

’ಶೌಚಾಲಯಗಳ ನಿರ್ಮಾಣಕ್ಕೆ ಹಾಗೂ ಅವುಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಬೇರೆ ಬೇರೆ ಟೆಂಡರ್ ನೀಡಲಾಗಿದೆ. ಶೌಚಾಲಯ ನಿರ್ಮಾಣ ಆಗಿದ್ದರೂ ಈಗ ನೀರಿನ ವ್ಯವಸ್ಥೆ ಬೇರೆಯವರು ಮಾಡಬೇಕಿದೆ. ಕಾರಣಾಂತರಗಳಿಂದ ಆ ಕೆಲಸ ತಡವಾಗಿದೆ. 20 ದಿನಗಳಲ್ಲಿ ಪೂರ್ಣಗೊಳಿಸುವುದಾಗಿ’ ನಗರಸಭೆ ಆಯುಕ್ತ ಗಣಪತಿ ಪಾಟೀಲ ಹೇಳುತ್ತಾರೆ.

 

 

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !