ದ್ವಿತಳಿ ರೇಷ್ಮೆ ಉತ್ಪಾದನೆಗೆ ಮುಂದಾಗಿ

7
ರೇಷ್ಮೆ ಇಲಾಖೆ ಅಭಿವೃದ್ದಿ ಆಯುಕ್ತ ಮಂಜುನಾಥ್ ಸಲಹೆ

ದ್ವಿತಳಿ ರೇಷ್ಮೆ ಉತ್ಪಾದನೆಗೆ ಮುಂದಾಗಿ

Published:
Updated:
Deccan Herald

ಕೋಲಾರ: ‘ವಿದೇಶಿ ಮಾರುಕಟ್ಟೆಯ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ದ್ವಿತಳಿ ರೇಷ್ಮೆ ಗೂಡು ಉತ್ಪಾದಿಸಲು ರೈತರು ಮುಂದಾಗಬೇಕು’ ಎಂದು ರಾಜ್ಯ ರೇಷ್ಮೆ ಇಲಾಖೆ ಅಭಿವೃದ್ದಿ ಆಯುಕ್ತ ಮಂಜುನಾಥ್ ತಿಳಿಸಿದರು.

ತಾಲ್ಲೂಕಿನ ರೈತರ ಹುಳು ಸಾಕಾಣೆ ಮನೆ ಹಾಗೂ ಹಿಪ್ಪು ನೇರಳೆ ತೋಟಗಳಿಗೆ ಭಾನುವಾರ ಭೇಟಿ ನೀಡಿ ವೀಕ್ಷಿಸಿ ಮಾತನಾಡಿ, ‘ಗುಣಮಟ್ಟದ ದ್ವಿತಳಿ ರೇಷ್ಮೆ ಗೂಡು ಬೆಳೆದು ವಿದೇಶಿ ಪೈಪೋಟಿಗೆ ನಾವು ಉತ್ತರ ನೀಡಬೇಕಾಗಿದೆ’ ಎಂದರು.

‘ಆಧುನಿಕತೆ, ತಾಂತ್ರಿಕತೆಯ ಬಳಕೆಯಿಂದ ರೇಷ್ಮೆ ಹುಳುಗಳಿಗೆ ರೋಗಗಳ ಹಾವಳಿ ತಪ್ಪಿಸಲಾಗಿದೆ. ರೈತರು ವೈಜ್ಞಾನಿಕ ಪದ್ದತಿ ಬಳೆಕ ಮಾಡಿಕೊಂಡರೆ ಕಡಿಮೆ ಖರ್ಚಿನಿಂದ ಹೆಚ್ಚು ಇಳುವರಿ ತೆಗೆದರೆ ಅಧಿಕ ಲಾಭಗಳಿಸಬಹುದು’ ಎಂದು ಹೇಳಿದರು.

‘ಮಿಶ್ರತಳಿ ಗೂಡನ್ನು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ರೈತರಲ್ಲಿ ಬದಲಾವಣೆಯ ಅಗತ್ಯವಿದೆ, ದ್ವಿತಳಿ ಬೆಳೆಯದಿದ್ದರೆ ಮುಂದಿನ ದಿನಗಳಲ್ಲಿ ನಾವು ವಿದೇಶೀ ರೇಷ್ಮೆ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಕಷ್ಟವಾಗುತ್ತದೆ’ ಎಂದರು.

ಇದಕ್ಕೂ ಮುನ್ನಾ ಆಯುಕ್ತರು ತೋಟಗಾರಿಕಾ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಚಟುವಟಿಕಗಳ ವಿವರ ಪಡೆದರಲ್ಲದೇ ಕಾಲೇಜಿನ ಡೀನ್ ಹಾಗೂ ವಿಜ್ಞಾನಿ ಶಶಿಧರ್ ಅವರೊಂದಿಗೆ ಮಾತುಕತೆ ನಡೆಸಿದರು.

ತಾಲ್ಲೂಕಿನ ನಾಗನಾಳ ಶ್ರೀನಿವಾಸ್, ಉಪ್ಪುಕುಂಟೆ ಉಮಾಬೈರೇಗೌಡ, ಅಂಕತಟ್ಟಿ ಈಶ್ವರ್ ತೋಟಗಳಿಗೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದುಕೊಂಡರು. ತಾಲ್ಲೂಕಿನ ಹೂವಳ್ಳಿಯಲ್ಲಿನ ಸ್ವಯಂಚಾಲಿನ ನೂಲುಬಿಚ್ಚಾಣಿಕ ಘಟಕಕ್ಕೆ ಆಯುಕ್ತ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೇಷ್ಮೆ ಇಲಾಖೆ ಉಪನಿರ್ದೇಶಕ ಪ್ರಭಾಕರ್, ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್, ವೆಂಕಟೇಶಪ್ಪ, ನಿರೀಕ್ಷಕರಾದ ಕಲ್ಯಾಣಸ್ವಾಮಿ, ಚಂದ್ರಶೇಖರಗೌಡ, ಪ್ರದರ್ಶಕ ಬ್ಯಾಟರಾಯಪ್ಪ,ರೇಷ್ಮೆ ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಸಿ.ಎಲ್.ನಾಗರಾಜ್, ಅಯ್ಯಪ್ಪಣ್ಣ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !