ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಬಲಗೈ ಬಂಟ ಜಬೀರ್‌ ಮೋತಿ ಸೆರೆ

7

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಬಲಗೈ ಬಂಟ ಜಬೀರ್‌ ಮೋತಿ ಸೆರೆ

Published:
Updated:
Deccan Herald

ಲಂಡನ್‌: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹಚರ, ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ಜಬೀರ್‌ ಮೋತಿಯನ್ನು ಶುಕ್ರವಾರ ಲಂಡನ್‌ ಪೊಲೀಸರು ಬಂಧಿಸಿದ್ದಾರೆ.

ದಾವೂದ್‌ನ ಬಲಗೈ ಬಂಟ ಎಂದೇ ಗುರುತಿಸಿಕೊಂಡಿದ್ದ ಬಜೀರ್‌ ಸಿದ್ದಿಕಿ ಅಲಿಯಾಸ್‌ ಜಬೀರ್‌ ಮೋತಿ (51), ದುಬೈ ಮತ್ತು ಬ್ರಿಟನ್‌ನಲ್ಲಿನ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ.  ಇಲ್ಲಿನ  ಹಿಲ್ಟನ್‌ ಹೋಟೆಲ್‌ನಲ್ಲಿ ಶುಕ್ರವಾರ ಬಂಧಿಸಲಾಗಿದೆ ಎಂದು ಲಂಡನ್‌  ಪೊಲೀಸರು ತಿಳಿಸಿದ್ದಾರೆ. 

ಜಬೀರ್‌ ಮೋತಿಯ ಪತ್ನಿ, ಸಂಬಂಧಿಕರು ಮತ್ತು ಗೆಳೆಯರು ಕರಾಚಿ ಮತ್ತು ದುಬೈನಲ್ಲಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ. 

ಪಾಕಿಸ್ತಾನದ ಪ್ರಜೆಯಾಗಿರುವ ಜಬೀರ್ ಮೋತಿ, 10 ವರ್ಷಗಳ ಬ್ರಿಟನ್‌ ವೀಸಾ ಪಡೆದುಕೊಂಡಿದ್ದ. ಇವನ ವಿರುದ್ಧ ಡ್ರಗ್ಸ್‌ ಮಾರಾಟಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳಿವೆ. 

ಜಬೀರ್ ಮೋತಿ ಭಾರತಕ್ಕೆ ಬೇಕಾಗಿರುವುದರಿಂದ ಎರಡು ದೇಶಗಳು ಇವನನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ಜಬೀರ್‌ ಮೋತಿಯ ಎರಡು ವಿಳಾಸಗಳು ಪತ್ತೆಯಾಗಿವೆ. ಒಂದು ಪಾಕಿಸ್ತಾನ, ಮತ್ತೊಂದು ಭಾರತದ ಮಹಾರಾಷ್ಟ್ರ ಎಂದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಈ ಹಂತದಲ್ಲಿ ನಾವು ಹೆಚ್ಚಿನ ನೀಡಲು ಸಾಧ್ಯವಿಲ್ಲ’ ಎಂದು ಲಂಡನ್‌ ಮೆಟ್ರೊಪಾಲಿಟಿನ್‌ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !