ಟೆಸ್ಟ್ ಕ್ರಿಕೆಟ್: ಹಾರ್ದಿಕ್ ದಾಳಿಗೆ ಇಂಗ್ಲೆಂಡ್ ದೂಳೀಪಟ

7
ಭಾರತಕ್ಕೆ ಮೊದಲ ಇನಿಂಗ್ಸ್‌ ಮುನ್ನಡೆ; ಪದಾರ್ಪಣೆಯಲ್ಲಿ ಮಿಂಚಿದ ವಿಕೆಟ್‌ಕೀಪರ್ ಪಂತ್

ಟೆಸ್ಟ್ ಕ್ರಿಕೆಟ್: ಹಾರ್ದಿಕ್ ದಾಳಿಗೆ ಇಂಗ್ಲೆಂಡ್ ದೂಳೀಪಟ

Published:
Updated:

ನಾಟಿಂಗಂ:  ಭಾನುವಾರ ಬೆಳಿಗ್ಗೆ ಮಳೆಯ ಆಟ ನಡೆದ ಅಂಗಳದಲ್ಲಿ ಮಧ್ಯಾಹ್ನದ ವೇಳೆಗೆ ಭಾರತದ ಮಧ್ಯಮವೇಗಿ ಹಾರ್ದಿಕ್ ಪಾಂಡ್ಯ ದೂಳೆಬ್ಬಿಸಿದರು. 

ಟ್ರೆಂಟ್‌ಬ್ರಿಜ್ ಕ್ರೀಡಾಂಗಣದಲ್ಲಿ ಹಾರ್ದಿಕ್ ಐದು ವಿಕೆಟ್‌ಗಳನ್ನು ಕಬಳಿಸಿದರು. ಇದರಿಂದಾಗಿ ಆತಿಥೇಯ ಇಂಗ್ಲೆಂಡ್ ತಂಡವು ಭಾರತದ ಎದುರಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 168 ರನ್‌ಗಳ ಹಿನ್ನಡೆ ಅನುಭವಿಸಿತು. ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತ ತಂಡವು 31 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 124 ರನ್‌ ಗಳಿಸಿತ್ತು.

ಶನಿವಾರ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರ ಉತ್ತಮ ಬ್ಯಾಟಿಂಗ್ ಬಲದಿಂದ 87 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 307 ರನ್‌ ಗಳಿಸಿತ್ತು. ಎರಡನೇ ದಿನ ಬೆಳಿಗ್ಗೆ ಸ್ವಲ್ಪ ಹೊತ್ತು ಮಳೆ ಸುರಿಯಿತು. ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು  326 ರನ್‌ಗಳಿಗೆ ಆಲೌಟ್ ಆಯಿತು. 

ಹಾರ್ದಿಕ್ ಸ್ವಿಂಗ್; ಪಂತ್ ಸೊಬಗು

ಭಾರತ ತಂಡವು ನಿರೀಕ್ಷೆಯಂತೆ ನಾಲ್ವರು ಮಧ್ಯಮವೇಗಿಗಳು ಮತ್ತು ಒಬ್ಬ ಸ್ಪಿನ್ನರ್‌ಗೆ ಈ ಪಂದ್ಯದಲ್ಲಿ ಅವಕಾಶ ನೀಡಿದೆ.  ಈ ಸೂತ್ರವು ಈಗ ಫಲಪ್ರದವಾಯಿತು.

ಐದನೇ ಬೌಲರ್‌ ಆಗಿ ದಾಳಿಗಿಳಿದ ಹಾರ್ದಿಕ್ ಅವರು ಜೋ ರೂಟ್, ಜಾನಿ ಬೆಸ್ಟೊ, ಜಾಸ್ ಬಟ್ಲರ್, ಕ್ರಿಸ್ ವೋಕ್ಸ್‌ ಮತ್ತು ಆದಿಲ್ ರಶೀದ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಲೈನ್ ಮತ್ತು ಲೆಂಗ್ತ್‌ಗಳನ್ನು ಕಾಪಾಡಿಕೊಂಡು ಬೌಲಿಂಗ್ ಮಾಡಿದ ಹಾರ್ದಿಕ್ ಎಸೆತಗಳನ್ನು ಆಡಲು ಬ್ಯಾಟ್ಸ್‌ಮನ್‌ಗಳು ಪರದಾಡಿದರು.

ಅನುಭವಿ ವೇಗಿ ಇಶಾಂತ್ ಶರ್ಮಾ ಎರಡು ವಿಕೆಟ್‌ಗಳನ್ನು ಪಡೆದು ಸಂಭ್ರಮಿಸಿದರು. ಸರಣಿಯಲ್ಲಿ ಮೊದಲ ಬಾರಿ ಅವಕಾಶ ಪಡೆದ ಜಸ್‌ಪ್ರೀತ್ ಬೂಮ್ರಾ ಕೂಡ ಎರಡು ವಿಕೆಟ್ ಕಬಳಿಸಿದರು. ಆದರೆ ಸ್ನಾಯು ಸೆಳೆತದಿಂದ ಬಳಲಿದ ಆರ್. ಅಶ್ವಿನ್ ಕೇವಲ ಒಂದು  ಓವರ್ ಮಾತ್ರ ಬೌಲಿಂಗ್ ಮಾಡಿ ವಿಶ್ರಾಂತಿ ಪಡೆದರು.

ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಿಕೆಟ್‌ಕೀಪರ್ ರಿಷಬ್ ಪಂತ್ ಮಿಂಚಿದರು. ಅವರು ಐದು ಆಕರ್ಷಕ ಕ್ಯಾಚ್‌ಗಳನ್ನು ಪಡೆದರು.


ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ರಿಷಬ್‌ ಪಂತ್‌

 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !