ಕನ್ವರ್‌ ಯಾತ್ರೆ: ಗುಂಪುಗಳ ನಡುವೆ ಕಲಹ

7

ಕನ್ವರ್‌ ಯಾತ್ರೆ: ಗುಂಪುಗಳ ನಡುವೆ ಕಲಹ

Published:
Updated:

ಜೈಪುರ್‌, ಸಿಖ್ಖರ್‌: ಫತೇಪುರ್‌ ನಗರದಲ್ಲಿ ಕನ್ವರ್‌ ಯಾತ್ರಿಕರು ಮತ್ತು ಮುಸ್ಲಿಮರ ನಡುವೆ ಭಾನುವಾರ ಮಾರಾಮಾರಿ ನಡೆದಿದ್ದು, ಸೋಮವಾರ ಸಿಆರ್‌ಪಿಸಿ 144 ಸೆಕ್ಷನ್‌ (ನಿಷೇಧಾಜ್ಞೆ) ಜಾರಿ ಮಾಡಲಾಗಿದೆ. 

ಘಟನೆಯಲ್ಲಿ ಎಂಟು ಯಾತ್ರಿಕರು ಗಾಯಗೊಂಡಿದ್ದು, ಮೂವರು ಮುಸ್ಲಿಮರನ್ನು ಬಂಧಿಸಲಾಗಿದೆ. 

ಕನ್ವರ್‌ ಯಾತ್ರಿಕರು ಮಸೀದಿಯ ಮುಂದೆ ಮೆರಣಿಗೆಯಲ್ಲಿ ಸಾಗುವಾಗ ಮುಸ್ಲಿಂ ಯುವಕರು ಅಬ್ಬರದ ಸಂಗೀತವನ್ನು ಕಡಿಮೆ ಮಾಡುವಂತೆ ಹೇಳಿದ್ದಾರೆ. ಇದೇ ವಿಷಯವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಕೈ ಮಿಲಾಯಿಸಿಕೊಂಡಿದ್ದಾರೆ. 

ಹೆಚ್ಚಿನ ಸಂಖ್ಯೆ ಮುಸ್ಲಿಂರನ್ನು ಬಂಧಿಸಬೇಕು ಎಂದು ಬಲಪಂಥಿಯ ಪಂಗಡದವರು ಧರಣಿ ನಡೆಸಿ, ಅಂಗಡಿಗಳನ್ನು ಮುಚ್ಚಿಸಿದರು. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಯಿತು. 

ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗದ ಜೊತೆಗೆ ಗಾಳಿಯಲ್ಲಿ ರಬ್ಬರ್‌ ಗುಂಡು‌ ಹಾರಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !