ಹೆಸರು ಕಾಳು ಖರೀದಿ: ರೈತರ ನೋಂದಣಿ ಕಾರ್ಯ ಆರಂಭ

7
ಬೆಂಬಲ ಬೆಲೆಯಡಿ ಹೆಸರು ಕಾಳು ಖರೀದಿ ಸೆ.10ರಿಂದ; 28 ಕಡೆ ಖರೀದಿ ಕೇಂದ್ರ ಪ್ರಾರಂಭ

ಹೆಸರು ಕಾಳು ಖರೀದಿ: ರೈತರ ನೋಂದಣಿ ಕಾರ್ಯ ಆರಂಭ

Published:
Updated:
Deccan Herald

ಬಾಗಲಕೋಟೆ: ಜಿಲ್ಲೆಯಲ್ಲಿ ಹೆಸರು ಕಾಳನ್ನು ಬೆಂಬಲ ಬೆಲೆಯಡಿ ಖರೀದಿಸಲು ಕೊನೆಗೂ ಸರ್ಕಾರ ಮುಂದಾಗಿದೆ. ‘ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಅಡಿ (ಎಂಎಸ್‌ಪಿ) ಜಿಲ್ಲೆಯಲ್ಲಿ ಸೆಪ್ಟೆಂಬರ್ 10ರಿಂದ ಹೆಸರು ಕಾಳು ಖರೀದಿಸಲಾಗುತ್ತಿದೆ.  

’ಕ್ವಿಂಟಲ್‌ಗೆ ₹ 6975 ಬೆಂಬಲ ಬೆಲೆ ನೀಡಿ ಜಿಲ್ಲೆಯ 28 ಕಡೆ ಖರೀದಿ ಕೇಂದ್ರ ಆರಂಭಿಸಿ ಹೆಸರು ಖರೀದಿಸಲಾಗುತ್ತಿದೆ. ಬೆಳೆಗಾರರ ನೋಂದಣಿ ಕಾರ್ಯ ಸೆಪ್ಟೆಂಬರ್ 1ರಿಂದಲೇ ಆರಂಭವಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ 45,455 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ. 13,163.59 ಟನ್‌ಗಳಷ್ಟು ಇಳುವರಿ ನಿರೀಕ್ಷಿಸಲಾಗಿದೆ.

’ನೋಂದಣಿ ಮಾಡಿಸಲು ರೈತರು, ಹೆಸರು ಕಾಳು ಬೆಳೆದ ಬಗ್ಗೆ ಕಂದಾಯ ಇಲಾಖೆಯಿಂದ ದೃಢೀಕರಣ ಪತ್ರ, ಪಹಣಿ ಪತ್ರ,ರೈತರ ಆಧಾರ್ ಕಾರ್ಡ್‌ಗೆ ಜೋಡಣೆಯಾದ ಬ್ಯಾಂಕ್ ಖಾತೆಯ ಪ್ರತಿ ಸಲ್ಲಿಸಬೇಕಿದೆ. ಎಕರೆಗೆ ನಾಲ್ಕು ಕ್ವಿಂಟಲ್‌ನಂತೆ ಪ್ರತಿ ರೈತರಿಂದ 10 ಕ್ವಿಂಟಲ್ ಮಾತ್ರ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತದೆ’ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ಎಲ್ಲೆಲ್ಲಿ ಖರೀದಿ ಕೇಂದ್ರಗಳು 

ತಾಲ್ಲೂಕು; ಕೇಂದ್ರಗಳು

ಬಾಗಲಕೋಟೆ ತಾಲ್ಲೂಕು; ಪಿಕೆಪಿಎಸ್ ನೀರಲಕೇರಿ, ಮುರನಾಳ, ಹಳ್ಳೂರ, ಬೆನಕಟ್ಟಿ, ಶಿರೂರ, ರಾಂಪುರ, ಅಮೀನಗಡ ಹಾಗೂ ಬಾಗಲಕೋಟೆಯ ಎಪಿಎಂಸಿ ಪ್ರಾಂಗಣ ಹಾಗೂ ಟಿಎಪಿಸಿಎಂಎಸ್

ಬಾದಾಮಿ; ಪಿಕೆಪಿಎಸ್ ಬಾದಾಮಿ, ಕೆರೂರ, ಗುಳೇದಗುಡ್ಡ (ಕೋಟಿಕಲ್ಲ), ಕಟಗೇರಿ ಹಾಗೂ ಟಿಎಪಿಸಿಎಂಎಸ್ ಬಾದಾಮಿ

ಮುಧೋಳ; ಪಿಕೆ‍‍ಪಿಎಸ್ ಮುಧೋಳ, ಲೋಕಾಪುರ, ಟಿಎಪಿಸಿಎಂಎಸ್ ಮುಧೋಳ

ಹುನಗುಂದ; ಪಿಕೆಪಿಎಸ್ ಹುನಗುಂದ, ಘಟ್ಟಿಗನೂರ, ಹಗೆದಾಳ, ನಾಗೂರ, ಪಿಕೆಪಿಎಸ್ ಇಳಕಲ್, ಜಂಬಲದಿನ್ನಿ, ಕೊಡಗಲಿ, ಕರಡಿ, ಕಂದಗಲ್ಲ, ನಂದವಾಡಗಿ, ಕೋಡಿಹಾಳ ಹಾಗೂ ಟಿಎಪಿಸಿಎಂಎಸ್ ಹುನಗುಂದ

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !