ಕೃಷ್ಣನ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ: ಎಚ್‌.ವಿ. ಮಂಜುನಾಥ್‌

7
ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಅಭಿಮತ

ಕೃಷ್ಣನ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ: ಎಚ್‌.ವಿ. ಮಂಜುನಾಥ್‌

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಶ್ರೀಕೃಷ್ಣನ ಜೀವನ ಹಾಗೂ ಅವನು ಬೋಧಿಸಿದ ಭಗವದ್ಗೀತೆ ಸರ್ವಕಾಲಕ್ಕೂ ಸರ್ವರಿಗೂ ಪ್ರಸ್ತುತವಾಗಿವೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹಾಭಾರತದ ಯುದ್ಧದಲ್ಲಿ ಅರ್ಜುನನ ಸಾರಥ್ಯ ವಹಿಸಿದ್ದ ಶ್ರೀಕೃಷ್ಣನು ಅಧರ್ಮವನ್ನು ತೊಲಗಿಸಿ ಧರ್ಮ ರಕ್ಷಣೆಗಾಗಿ ಹೋರಾಡಲು ಅರ್ಜುನನಿಗೆ ಉಪದೇಶಿಸುವ ಮೂಲಕ ಅಧರ್ಮದ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಬೇಕು ಎಂದು ಜಗತ್ತಿಗೆ ಸಾರಿದ್ದಾನೆ. ಆ ತತ್ವವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ಶಿಕ್ಷಣ ತಜ್ಞ ಪ್ರೊ. ಕೋಡಿರಂಗಪ್ಪ ಮಾತನಾಡಿ, ‘ಶ್ರೀಕೃಷ್ಣ ಜೀವನೊತ್ಸಾಹದ ಸಂಕೇತ. ಆತನ ಪ್ರಬುದ್ಧತೆ, ಮುತ್ಸದಿತನ ಎಲ್ಲ ಕಾಲಘಟ್ಟಕ್ಕೂ ಮಾದರಿಯಾಗಿ ನಿಲ್ಲುತ್ತದೆ. ಯುದ್ದ ಕಾಲದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ನೀಡಿದ ಬೋಧನೆ ಪ್ರತಿಯೊಬ್ಬರೂ ಪಾಲಿಸುವಂತಿದೆ. ಉತ್ತಮ ರಾಜ ನೀತಿಜ್ಞನಾಗಿದ್ದ ಕೃಷ್ಣ ಸಹನೆ, ತಾಳ್ಮೆಯಂತಹ ಗುಣಗಳಿಂದ ವಿಶೇಷವಾಗಿ ನಿಲ್ಲುತ್ತಾನೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್.ಅನುರಾಧಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ನಗರಸಭೆ ಅಧ್ಯಕ್ಷ ಮುನಿಕೃಷ್ಣಪ್ಪ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !