ಮದನ್, ಶಶಾಂಕ್‌ ಶತಕ ವೈಭವ

7
ವೈ.ಎಸ್‌.ರಾಮಸ್ವಾಮಿ ಅಂತರ ಕ್ಲಬ್ ಕ್ರಿಕೆಟ್ ಟೂರ್ನಿ: ಸತ್ಯ ಪರಿಣಾಮಕಾರಿ ದಾಳಿ

ಮದನ್, ಶಶಾಂಕ್‌ ಶತಕ ವೈಭವ

Published:
Updated:

ಬೆಂಗಳೂರು: ಮದನ್‌ ಬಿ (144) ಮತ್ತು ಶಶಾಂಕ್ (ಔಟಾಗದೆ 151) ಅವರ ಅಮೋಘ ಶತಕಗಳ ನೆರವಿನಿಂದ ನೆಪ್ಚೂನ್ ಕ್ರಿಕೆಟ್ ಕ್ಲಬ್ ತಂಡ ವೈ.ಎಸ್.ರಾಮಸ್ವಾಮಿ ಸ್ಮಾರಕ ಅಂತರ ಕ್ಲಬ್‌ ಕ್ರಿಕೆಟ್ ಟೂರ್ನಿಯಲ್ಲಿ 167 ರನ್‌ಗಳಿಂದ ಡಾಲ್ಫಿನ್‌ ಕ್ರಿಕೆಟರ್ಸ್‌ ಎದುರು ಜಯಭೇರಿ ಮೊಳಗಿಸಿದೆ.

ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೆಪ್ಚೂನ್‌ ತಂಡ 50 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 350 ರನ್‌ ಸೇರಿಸಿತ್ತು. ನಂತರ ಎದುರಾಳಿ ತಂಡವನ್ನು 183 ರನ್‌ಗಳಿಗೆ ಆಲೌಟ್ ಮಾಡಿತು.

ಸಂಕ್ಷಿಪ್ತ ಸ್ಕೋರು: ನೆಪ್ಚೂನ್ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 3 ವಿಕೆಟ್‌ಗೆ 350 (ಮದನ್‌ ಬಿ 144, ಶಶಾಂಕ್‌ ಔಟಾಗದೆ 151); ಡಾಲ್ಫಿನ್ ಕ್ರಿಕೆಟರ್ಸ್‌: 32.5 ಓವರ್‌ಗಳಲ್ಲಿ 183 (ಪ್ರತಾಪ್‌ 63, ದರ್ಶನ್‌ ಔಟಾಗದೆ 35; ಶಿವಂ 34ಕ್ಕೆ2, ಪ್ರತೀಕ್‌ 45ಕ್ಕೆ3, ಮದನ್‌ 23ಕ್ಕೆ3). ಫಲಿತಾಂಶ: ನೆಪ್ಚೂನ್ ಕ್ಲಬ್‌ಗೆ 167 ರನ್‌ಗಳ ಜಯ. 

ಯಂಗ್‌ ಲಯನ್ಸ್ ಕ್ಲಬ್‌: 35 ಓವರ್‌ಗಳಲ್ಲಿ 7 ವಿಕೆಟ್‌ಗೆ 181 (ವಿಘ್ನೇಶ್‌ ಎನ್‌.ಜಿ 61; ಅಕ್ಷಯ್‌ ಎಸ್‌ ಹಿರೇಮಠ 37ಕ್ಕೆ3, ಉಮೇಶ್‌ ಕಲಾಲ್‌ 24ಕ್ಕೆ3); ಕ್ರಿಕೆಟ್ ಕ್ಲಬ್‌ ಆಫ್ ಕರ್ನಾಟಕ, ಧಾರವಾಡ: 32.1 ಓವರ್‌ಗಳಲ್ಲಿ 109 (ಸುಧನ್ವ ಕುಲಕರ್ಣಿ 26; ಚೇತನ್‌ 9ಕ್ಕೆ2, ರೋಷನ್‌ ಅಶ್ವಕ್‌ 30ಕ್ಕೆ2, ಯೋಗೇಶ್‌ 6ಕ್ಕೆ3). ಫಲಿತಾಂಶ: ಯಂಗ್‌ ಲಯನ್ಸ್ ಕ್ಲಬ್‌ಗೆ 72 ರನ್‌ ಜಯ.

ವೈಎಂಸಿಎ ಕ್ರಿಕೆಟ್ ಕ್ಲಬ್‌–3: 46.2 ಓವರ್‌ಗಳಲ್ಲಿ 145 (ಪೃಥ್ವಿ 54, ಜೇಹು 39; ಪೀಯೂಷ್‌ 18ಕ್ಕೆ2, ಸತ್ಯ 27ಕ್ಕೆ5); ಆರ್‌ವಿಸಿಇ ಕ್ಲಬ್‌: 16.4 ಓವರ್‌ಗಳಲ್ಲಿ 2 ವಿಕೆಟ್‌ಗೆ 146 (ಅಂಜನಿ ಕುಮಾರ್‌ 89, ಸೂರಜ್ ಪಟೇಲ್‌ 30). ಫಲಿತಾಂಶ: ಆರ್‌ವಿಸಿಇ ಕ್ರಿಕೆಟ್ ಕ್ಲಬ್‌ಗೆ 8 ವಿಕೆಟ್‌ಗಳ ಗೆಲುವು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !