ಹಲ್ಲೆ ಘಟನೆ ಪೂರ್ವಯೋಜಿತ: ಪಂಚಮಸಾಲಿ ಶ್ರೀ

7
ಸಬ್‌ಇನ್‌ಸ್ಪೆಕ್ಟರ್ ಅಮಾನತುಗಳಿಸಲು ಒತ್ತಾಯ, ಕಾಣದ ಕೈಗಳ ಬಂಧನಕ್ಕೂ ಸ್ವಾಮೀಜಿ ಆಗ್ರಹ

ಹಲ್ಲೆ ಘಟನೆ ಪೂರ್ವಯೋಜಿತ: ಪಂಚಮಸಾಲಿ ಶ್ರೀ

Published:
Updated:

ಬಾಗಲಕೋಟೆ: ‘ಹುನಗುಂದನಲ್ಲಿ ಪಿಕೆಪಿಎಸ್ ಚುನಾವಣೆ ಸಂದರ್ಭದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮೇಲೆ ನಡೆದಿರುವ ಹಲ್ಲೆ ಪೂರ್ವಯೋಜಿತ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಜಯಮೃಂತ್ಯುಜಯ ಸ್ವಾಮೀಜಿ ಆರೋಪಿಸಿದರು.

ನಗರದಲ್ಲಿ  ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಈ ಗಲಾಟೆ ನಡೆಸಲು ಮೂರು ದಿನ ಮುಂಚಿತವಾಗಿಯೇ ಯೋಜನೆ ರೂಪಿಸಲಾಗಿದೆ. ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರಲಾಗಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಅಲ್ಲಿದ್ದ ಮಹಿಳೆಯರ ಮೇಲೂ ಹಲ್ಲೆಗೊಳಗಾಗಿದ್ದಾರೆ. ಕೆಲವರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಘಟನೆಯಂದ ಹುನಗುಂದ ಪಟ್ಟಣದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಹಲ್ಲೆ ಮಾಡಿದವರು ಹಾಗೂ ಅದಕ್ಕೆ ಕುಮ್ಮಕ್ಕು ನೀಡಿದವರು ಇಬ್ಬರನ್ನೂ ಪೊಲೀಸರು ಬಂಧಿಸಲಿ’ ಎಂದು ಆಗ್ರಹಿಸಿದರು.

’ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದ್ದ ಪಿ.ಕೆ.ಪಿ.ಎಸ್‌ನಲ್ಲಿ ಈ ಘಟನೆ ನಡೆಯಬಾರದಿತ್ತು. ಇದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತದ್ದು’ ಎಂದು ಬೇಸರ ವ್ಯಕ್ತಪಡಿಸಿದರು. ‘ಚುನಾವಣೆ ನಡೆಯುತ್ತಿದ್ದೆ ಎಂಬ ಮಾಹಿತಿ ಇದ್ದರೂ, ಅಲ್ಲಿನ ಸಬ್‌ಇನ್‌ಸ್ಪೆಕ್ಟರ್ ರಜೆಯ ಮೇಲೆ ತೆರಳಿದ್ದಾರೆ. ಇದು ಅವರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗುವ ಜೊತೆಗೆ ಬೇರೆಯದ್ದೇ ಸಂದೇಶ ನೀಡುತ್ತದೆ. ಸರ್ಕಾರ ಕೂಡಲೇ ಅವರನ್ನು ಅಮಾನತುಗೊಳಿಸಬೇಕು’ ಎಂದರು.

‘ಚುನಾವಣೆ ಎಂದರೆ ಆರೋಪ ಪ್ರತ್ಯಾರೋಪಗಳ ಸಹಜ, ಆದರೆ ಈ ರೀತಿ ಹಲ್ಲೆ ನಡೆಸಿದನ್ನು ಲಿಂಗಾಯತ ಪಂಚಮಸಾಲಿ ಸಮಾಜ ಖಂಡಿಸಲಿದೆ. ಕೂಡಲಸಂಗಮದಲ್ಲಿ ಸೆಪ್ಟೆಂಬರ್ 9 ರಂದು ಬಸವ ಪಂಚಮಿ ಕಾರ್ಯಕ್ರಮದ ವೇಳೆ ಖಂಡನಾ ಸಭೆ ನಡೆಸಲಾಗುತ್ತದೆ’ ಎಂದು ಹೇಳಿದರು.

ಇಳಕಲ್‌ ವೃತ್ತದ ಸಿ.ಪಿ.ಐ ಅಂದು ಅನಾರೋಗ್ಯದ ಕಾರಣ ರಜೆ ಪಡೆದಿದ್ದರು ಎಂದು ಪ್ರಶ್ನೆಯೊಂದಕ್ಕೆ ಶ್ರೀಗಳು ಪ್ರತಿಕ್ರಿಯಿಸಿದರು.

ತಾಲ್ಲೂಕು ಪಂಚಾಯ್ತಿ ಸದ್ಯ ಬಸವರಾಜ ಕಂಜೋಡಿ, ಅಶೋಕ ರಾಂಪುರ, ಎ.ಪಿ.ಎಂ.ಸಿ ಅಧ್ಯಕ್ಷ ಶಿವಾನಂದ ಅಬ್ಜಲಪುರ್,  ಬಾಗಲಕೋಟೆ ನಗರಸಭೆ ಸದಸ್ಯ ಚನ್ನವೀರಪ್ಪ ಅಂಗಡಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !