ಇಂದು ಪ್ರತಿಭಾ ಪುರಸ್ಕಾರ

7

ಇಂದು ಪ್ರತಿಭಾ ಪುರಸ್ಕಾರ

Published:
Updated:

ಹಾಸನ: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಬಾಬು ಜಗಜೀವನ್‌ರಾಮ್‌ ಕ್ಷೇಮಾಭಿವದ್ಧಿ ಸಂಘದ ಆಶ್ರಯದಲ್ಲಿ ಸೆ. 9ರಂದು ಬೆಳಿಗ್ಗೆ 10 ಗಂಟೆಗೆ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್‌ ಕಾರ್ಯಕ್ರಮ ಉದ್ಘಾಟಿಸುವರು.

ಸಾಂಸ್ಕತಿಕ ಚಟುವಟಿಕೆ ಉದ್ಘಾಟನೆ ನಾಳೆ

ಹಾಸನ: ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಸೆ. 10ರಂದು ಮಧ್ಯಾಹ್ನ 3 ಗಂಟೆಗೆ ವಿವಿಧ ಸಂಘಗಳ, ಕ್ರೀಡಾ ಚಟುವಟಿಕೆಗಳ, ಯುವ ರೆಡ್‌ಕ್ರಾಸ್‌, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದ್ದ. ಉಪವಿಭಾಗಾಧಿಕಾರಿ ಎಚ್‌.ಎಲ್‌. ಕಾರ್ಯಕ್ರಮ ಉದ್ಘಾಟಿಸುವರು.

11ರಂದು ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರ

ಹಾಸನ: ನಗರದ ಸಂಪಿಗೆ ನರ್ಸಿಂಗ್‌ ಹೋಂನಲ್ಲಿ ಸೆ. 11ರಂದು ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ತಿಂಗಳಿಗೂ ಮೇಲ್ಪಟ್ಟು ವಾಸಿಯಾಗದ ಗಾಯ, ರಕ್ತಸ್ರಾವ, ಊತ, ಗಡಸುತನ, ನುಂಗುವಾಗ ತೊಂದರೆ, ಗಂಟಲಲ್ಲಿ ಉರಿತ, ಧ್ವನಿ ಬದಲಾವಣೆ ಈ ರೋಗ ಲಕ್ಷಣ ಇರುವವರು ಶಿಬಿರದಲ್ಲಿ ಭಾಗವಹಿಸಬಹುದು. ಮಾಹಿತಿಗೆ ಮೊ. 7204059259, 9483126782 ಸಂಪರ್ಕಿಸಬಹುದಾಗಿ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !