ಮಹಿಳೆ ಮೇಲೆ ರಾಸಾಯನಿಕ ಎರಚಿದ್ದವನ ಬಂಧನ

7

ಮಹಿಳೆ ಮೇಲೆ ರಾಸಾಯನಿಕ ಎರಚಿದ್ದವನ ಬಂಧನ

Published:
Updated:

ಮಂಗಳೂರು: ನಗರದ ಕೇಂದ್ರ ಮಾರುಕಟ್ಟೆಯಲ್ಲಿ ಶುಕ್ರವಾರ ಮೀನು ಮಾರುವ ಮಹಿಳೆಯೊಬ್ಬರ ಮೇಲೆ ರಾಸಾಯನಿಕ ಎರಚಿ ಗಾಯಗೊಳಿಸಿದ್ದ ಆರೋಪಿಯನ್ನು ಮಂಗಳೂರು ಉತ್ತರ (ಬಂದರು) ಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪಾಂಡೇಶ್ವರ ನಿವಾಸಿ ನೌಷಾದ್‌ ಬಂಧಿತ ಆರೋಪಿ. ಈತ ಶುಕ್ರವಾರ ಬೆಳಿಗ್ಗೆ ಕೇಂದ್ರ ಮಾರುಕಟ್ಟೆಯಲ್ಲಿ ರಾಜಕುಮಾರಿ ಎಂಬ ಮೀನು ಮಾರುವ ಮಹಿಳೆ ಮೇಲೆ ರಾಸಾಯನಿಕ ಎರಚಿದ್ದ. ಗಾಯಗೊಂಡು ಕೂಗಾಡುತ್ತಿದ್ದ ಮಹಿಳೆಯನ್ನು ಸ್ಥಳದಲ್ಲಿದ್ದ ಜನರು ಆಸ್ಪತ್ರೆಗೆ ದಾಖಲಿಸಿದ್ದರು.

ಆಸ್ಪತ್ರೆಯಿಂದ ರವಾನೆಯಾದ ವರದಿ ಆಧರಿಸಿ ಅಲ್ಲಿಗೆ ಹೋಗಿ ಮಹಿಳೆಯ ಹೇಳಿಕೆ ದಾಖಲಿಸಿಕೊಂಡಿದ್ದ ಬಂದರು ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಘಟನಾ ಸ್ಥಳವನ್ನೂ ಪರಿಶೀಲನೆ ನಡೆಸಿದ್ದರು. ನಂತರ ಆರೋಪಿಯನ್ನು ಪತ್ತೆಮಾಡಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ನೌಷಾದ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಯು ಹಿಂದೆಯೂ ಸಾರ್ವಜನಿಕರನ್ನು ಬೆದರಿಸಲು ಯತ್ನಿಸಿರುವ ಪ್ರಕರಣಗಳು ನಡೆದಿರುವುದಾಗಿ ದೂರುಗಳು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !