ಬಿಜೆಪಿ ರಾಜ್ಯದಲ್ಲಿ ನೆಲಕಚ್ಚಿದೆ: ಸಚಿವ ಆರ್.ಶಂಕರ್

7

ಬಿಜೆಪಿ ರಾಜ್ಯದಲ್ಲಿ ನೆಲಕಚ್ಚಿದೆ: ಸಚಿವ ಆರ್.ಶಂಕರ್

Published:
Updated:

ಕೋಲಾರ: ‘ಬಿಜೆಪಿ ರಾಜ್ಯದಲ್ಲಿ ನೆಲಕಚ್ಚಿರುವ ಬೇಸರದಿಂದ ಸಮ್ಮಿಶ್ರ ಸರ್ಕಾರದ ಸಚಿವರು ಬಂಧನಕ್ಕೆ ಒಳಗಾಗುತ್ತಾರೆ ಎಂಬ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ’ ಎಂದು ಅರಣ್ಯ ಸಚಿವ ಆರ್.ಶಂಕರ್ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಡಿ.ಕೆ.ಶಿವಕುಮಾರ್ ಅವರ ವಿಚಾರವಾಗಿ ಬಂಧನ ಇನ್ನೊಂದು, ಮತ್ತೊಂದು ಊಹಾಪೋಹಗಳು ಹರಿದಾಡುತ್ತಿವೆ. ಇವೆಲ್ಲವೂ ಬಿಜೆಪಿಯವರ ಕುತಂತ್ರ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದರು.

‘ಬಿಜೆಪಿಯವರು ಇನ್ನು 5 ವರ್ಷಗಳು ಇದೇ ರೀತಿ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಮುಂದಿನ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಅವರು ಹೇಳಿಕೊಳ್ಳಲು ವಿಷಯ ಇಲ್ಲದಂತಾಗಿದೆ. ಇದರಿಂದಾಗಿ ಮನಸ್ಸಿಗೆ ಬಂದ ಹಾಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದ್ದು, ಈ ಹಿನ್ನೆಲೆಯಲ್ಲಿ ಹಿನ್ನೆಲೆ ಸಮ್ಮಿಶ್ರ ಸರ್ಕಾರವೂ ಬಂದ್‌ಗೆ ಬೆಂಬಲನೀಡುತ್ತಿದೆ’ ಎಂದು ಪ್ರಕಟಿಸಿದರು.

ಸಮ್ಮಿಶ್ರ ಸರ್ಕಾರ ಸುಭದ್ರ

‘ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಎರಡೂ ಪಕ್ಷಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲದೆ ಜನರನ್ನು ಯಮಾರಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್ ಟೀಕಿಸಿದರು.

‘ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಇಡಿ, ಸಿಬಿಐ ದಾಳಿಯಿಂದಾಗಿ ಸರ್ಕಾರದ ಮೇಲೆ ಆಗಲಿ, ಡಿಕೆಶಿ ವ್ಯಕ್ತಿತ್ವದ ಮೇಲೆ ಆಗಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಶಿವಕುಮಾರ್ ಅಕ್ರಮ ಎಸಗಿಲ್ಲ ಎನ್ನುವುದನ್ನು ನ್ಯಾಯಾಲಯ ತೀರ್ಪು ನೀಡುತ್ತದೆ. ಅದರ ಬಗ್ಗೆ ನಾವು ಮಾತನಾಡುವುದು ಸರಿಯಲ್ಲ. ಒಟ್ಟಾರೆ ಅವರ ಬಂಧನ ಸಾಧ್ಯವಿಲ್ಲ. ಬಿಜೆಪಿಯವರು ಹಗಲುಗನಸ್ಸು ಕಾಣುತ್ತಿದ್ದಾರೆ’ ಎಂದು ತಿಳಿಸಿದದರು.

‘ಡಾಲರ್ ಕುಸಿದು ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಾಗಿದೆ. ಜನಸಾಮಾನ್ಯರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಕಾಂಗ್ರೆಸ್, -ಜೆಡಿಎಸ್ ಮೈತ್ರಿಯಾಗಿರುವುದರಿಂದ ಬಂದ್‌ಗೆ ನಾವೂ ಬೆಂಬಲ ನೀಡಲೇಬೇಕು. ತೈಲ ಬೆಲೆ ಏರಿಕೆಯಿಂದ ಬಿಜೆಪಿ ನಾಯಕರು ಜನರ ಮುಂದೆಗೆ ಹೋಗಲು ಹೆದರುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !