ರಾಜಕೀಯ ಉದ್ವಿಗ್ನತೆ ಸೃಷ್ಟಿಸುತ್ತಿರುವ ಮಾಧ್ಯಮಗಳು

7
ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಬೇಸರ

ರಾಜಕೀಯ ಉದ್ವಿಗ್ನತೆ ಸೃಷ್ಟಿಸುತ್ತಿರುವ ಮಾಧ್ಯಮಗಳು

Published:
Updated:
Deccan Herald

ಹುಣಸೂರು: ‘ರಾಜ್ಯ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎದ್ದಿದೆ ಎಂದು ಮಾಧ್ಯಮಗಳು ಬಿಂಬಿಸುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಹೇಳಿದರು.

‘ರಾಜ್ಯದಲ್ಲಿ ಸರ್ಕಾರಕ್ಕೆ ಯಾವುದೇ ತೊಂದರೆ ಎದುರಾಗಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿದೆ. ವಸ್ತುಸ್ಥಿತಿ ತಿಳಿಯದೆ ಕೆಲವೊಂದು ಊಹಾಪೋಹಗಳಿಗೆ ಆದ್ಯತೆ ನೀಡಿ ದೃಶ್ಯಮಾಧ್ಯಮಗಳಲ್ಲಿ ಸಿನಿಮಾ ರೀತಿ ತೋರಿಸಿ ರಾಜಕೀಯ ಉದ್ವಿಗ್ನತೆ ಸೃಷ್ಠಿ ಮಾಡಲಾಗುತಿದೆ. ಇದು ಸಲ್ಲದು’ ಎಂದು ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ರಾಜಕಾರಣಿಗಳಾದ ನಾವೂ ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡು ಮತದಾರರ ಸಮಸ್ಯೆಗಳತ್ತ ಗಮನ ನೀಡಬೇಕಾಗಿದೆ. ಜನಪ್ರತಿನಿಧಿಗಳಿಗೆ ಅವರದ್ದೇ ಆದ ಜವಾಬ್ದಾರಿಗಳಿದ್ದು ಅವುಗಳನ್ನು ಕಾರ್ಯಗತಗೊಳಿಸುವತ್ತ ಚಿತ್ತ ಹರಿಸಬೇಕು. ಅಧಿಕಾರ ಸಿಕ್ಕಿದೆ ಎಂದು  ಮನಬಂದಂತೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ ಉತ್ತಮ ಆಡಳಿತ ನಡೆಸಲು ಸರ್ಕಾರಕ್ಕೆ ಸಹಕಾರ ನೀಡಬೇಕು’ ಎಂದರು.

ಎಂಡಿಸಿಸಿ ಬ್ಯಾಂಕ್ ಹಗರಣ: ಹುಣಸೂರು ಮತ್ತು ಬಿಳಿಕೆರೆ ಎಂ.ಡಿ.ಸಿ.ಸಿ. ಸಹಕಾರಿ ಬ್ಯಾಂಕ್‌ನಲ್ಲಿ ನಡೆದಿರುವ ₹27 ಕೋಟಿ ಅವ್ಯವಹಾರ ಕುರಿತು ಈಗಾಗಲೇ ಎರಡು ತನಿಖಾ ತಂಡ ರಚಿಸಿದ್ದು, ತನಿಖೆ ಮುಗಿದ ಬಳಿಕ ಆರೋಪಿಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸರ್ಕಾರ ಬದ್ಧ ಎಂದ ಅವರು, ಸಹಕಾರಿ ಸಂಘಗಳಲ್ಲಿ ಆಗುತ್ತಿರುವ ಹಣ ದುರ್ಬಳಕೆ ತಡೆಯಲು ಸಹಕಾರಿ ತತ್ವದಲ್ಲಿ ಕೆಲವೊಂದು ಸುಧಾರಣೆ ತರಬೇಕಾಗಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !