ವಿವಾದಿತ ‌ವ್ಯಂಗಚಿತ್ರವನ್ನು ಪುನರ್‌ ಮುದ್ರಿಸಿದ ಪತ್ರಿಕೆ: ಮುಗಿಯದ ಸೆರೆನಾ ವಿವಾದ

7

ವಿವಾದಿತ ‌ವ್ಯಂಗಚಿತ್ರವನ್ನು ಪುನರ್‌ ಮುದ್ರಿಸಿದ ಪತ್ರಿಕೆ: ಮುಗಿಯದ ಸೆರೆನಾ ವಿವಾದ

Published:
Updated:
Deccan Herald

ಮೆಲ್ಬರ್ನ್‌: ಅಮೆರಿಕ ಓಪನ್‌ ಟೆನಿಟ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಸೆರೆನಾ ತೋರಿದ ವರ್ತನೆ ಹಾಗೂ ಅದಕ್ಕೆ ಸಂಬಂಧಿಸಿದ ವಿವಾದ ಕೊನೆಗೊಳ್ಳುವ ಹಾಗೇ ಕಾಣುತ್ತಿಲ್ಲ. 

ಈ ಘಟನೆ ಕುರಿತು ಆಸ್ಟ್ರೇಲಿಯಾದ ‘ದಿ ಹೆರಾಲ್ಡ್‌ ಸನ್‌’ ಪತ್ರಿಕೆಯು ಮೈಕೆಲ್‌ ನೈಟ್‌ ಅವರು ರಚಿಸಿರುವ ವ್ಯಂಗ್ಯವಿತ್ರವೊಂದನ್ನು ‘ವೆಲ್‌ಕಮ್‌ ಟು ದಿ ಪಿಸಿ ವರ್ಲ್ಡ್‌’ ಎಂಬ ಹೆಸರಿನಲ್ಲಿ ಮಂಗಳವಾರ ಪ್ರಕಟಿಸಿತ್ತು. ಈ ವ್ಯಂಗ್ಯ ಚಿತ್ರವು ಜನಾಂಗೀಯ ದ್ವೇಷದಿಂದ ಕೂಡಿದೆ ಎಂದು ಹಲವರು ತೀವ್ರವಾಗಿ ಟೀಕಿಸಿದ್ದರು. ಆದರೆ, ಪತ್ರಿಕೆಯು ಇದೇ ವ್ಯಂಗ್ಯಚಿತ್ರವನ್ನು ಬುಧವಾರ ಮತ್ತೆ ಮುಖಪುಟದಲ್ಲಿ ಪ್ರಕಟಿಸಿ ಮೈಕೆಲ್‌ ಅವರಿಗೆ ಬೆಂಬಲ ಸೂಚಿಸಿದೆ. 

ಈ ವಿವಾದದ ಬಗ್ಗೆ ಮಾತನಾಡಿರುವ ಮೈಕೆಲ್‌ ‘ಪಂದ್ಯದ ವೇಳೆ ಸೆರೆನಾ ತೋರಿದ ವರ್ತನೆ ಸರಿ ಇರಲಿಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು ವ್ಯಂಗ್ಯಚಿತ್ರ ರಚಿಸಿದ್ದೇನೆ. ಕಪ್ಪುವರ್ಣೀಯರನ್ನು ಗುರಿಯಾಗಿಸುವ ಯಾವುದೇ ಉದ್ದೇಶ ಇದರ ಹಿಂದೆ ಕೆಲಸ ಮಾಡಿಲ್ಲ’ ಎಂದು ಹೇಳಿದ್ದಾರೆ. 

ಈ ವ್ಯಂಗ್ಯಚಿತ್ರದಲ್ಲಿ ಸೆರೆನಾ ಅವರು ಅಂಪೈರ್‌ ನಿರ್ಧಾರದಿಂದಾಗಿ ಸಿಟ್ಟಿನಿಂದ ರ‍್ಯಾಕೆಟ್‌ ಅನ್ನು ನೆಲಕ್ಕೆ ಬಡಿದು ಅಸಮಾಧಾನ ವ್ಯಕ್ತ‍ಪಡಿಸುತ್ತಿದ್ದಾರೆ. ಪಂದ್ಯದ ಅಂಪೈರ್‌ ಕಾರ್ಲೋಸ್‌ ರಾಮೊಸ್‌, ‘ಸೆರೆನಾಗೆ ಜಯ ಸಿಗಲು ಅನುವು ಮಾಡಿಕೊಡುತ್ತೀಯಾ’ ಎಂದು ಎದುರಾಳಿ ಆಟಗಾರ್ತಿ ನವೋಮಿ ಒಸಾಕಗೆ ಹೇಳುತ್ತಿದ್ದಾರೆ. 

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !