ಧೈರ್ಯವಿದ್ದರೆ ನಮ್ಮಲ್ಲಿ ಒಬ್ಬರನ್ನಾದರೂ ಮುಟ್ಟಲಿ ನೋಡೋಣ: ಚರಂತಿಮಠ

7

ಧೈರ್ಯವಿದ್ದರೆ ನಮ್ಮಲ್ಲಿ ಒಬ್ಬರನ್ನಾದರೂ ಮುಟ್ಟಲಿ ನೋಡೋಣ: ಚರಂತಿಮಠ

Published:
Updated:
Deccan Herald

ಬಾಗಲಕೋಟೆ: ’ಜನಾದೇಶ ಸಿಕ್ಕರೂ ಬಿಜೆಪಿಗೆ ಅನ್ಯಾಯವಾಗಿದೆ ಎಂಬ ಭಾವನೆ ರಾಜ್ಯದ ಜನರಲ್ಲಿದೆ. ನಾವು ಸರ್ಕಾರ ರಚನೆ ಮಾಡಲಿ ಎಂಬುದು ಅವರದ್ದೇ (ಜನರ) ಆಸೆಯಾಗಿದೆ’ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು. 

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ’ಬಿಜೆಪಿ ಶಾಸಕರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುದೆಲ್ಲಾ ಹುಸಿಬಾಂಬ್. ನಾವು 104 ಶಾಸಕರೂ ಒಗ್ಗಟ್ಟಾಗಿದ್ದೇವೆ. ಧೈರ್ಯವಿದ್ದರೆ ನಮ್ಮಲ್ಲಿ ಒಬ್ಬರನ್ನಾದರೂ ಮುಟ್ಟಲಿ ನೋಡೋಣ’ ಎಂದು ಸವಾಲು ಹಾಕಿದರು.

’ರಾಜ್ಯದಲ್ಲಿ ಸರ್ಕಾರವೇ ಇಲ್ಲದ ಮೇಲೆ ಅದನ್ನು ಕೆಡವೋದು ಎಲ್ಲಿಂದ ಬಂತು. ನಾವಂತೂ ಅವರ ಉಸಾಬರಿಗೆ ಹೋಗೊಲ್ಲ. ಅವರವರೇ ಹೊಡೆದಾಡಿಕೊಂಡು ಹಾಳಾಗಲಿದ್ದಾರೆ. ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಬಿಜೆಪಿ ಪಾಳಯದಲ್ಲಿ ಉತ್ಸಾಹ ಗರಿಗೆದರಿರುವುದಂತೂ ಕರೆ (ಸತ್ಯ)’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !