ಕವಿ ಸಿದ್ದಯ್ಯ ಪುರಾಣಿಕ ಜನ್ಮಶತಮಾನೋತ್ಸವ: 15ಕ್ಕೆ ರಾಷ್ಟ್ರೀಯ ವಿಚಾರ ಸಂಕಿರಣ

7
ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗ

ಕವಿ ಸಿದ್ದಯ್ಯ ಪುರಾಣಿಕ ಜನ್ಮಶತಮಾನೋತ್ಸವ: 15ಕ್ಕೆ ರಾಷ್ಟ್ರೀಯ ವಿಚಾರ ಸಂಕಿರಣ

Published:
Updated:

ಬಾಗಲಕೋಟೆ: ಕವಿ ಸಿದ್ಧಯ್ಯ ಪುರಾಣಿಕ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಇಲ್ಲಿನ ಬಿ.ವಿ.ವಿ ಸಂಘದ ಬಸವೇಶ್ವರ ಕಲಾ ಕಾಲೇಜಿನ ಸಹಯೋಗದಲ್ಲಿ ಸೆ.15ರಂದು ರಾಷ್ಟ್ರೀಯ ವಿಚಾರಸಂಕಿರಣ ಹಮ್ಮಿಕೊಳ್ಳಲಾಗಿದೆ.

ಬಸವೇಶ್ವರ ಕಾಲೇಜು ಸಭಾಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸಂಚಾಲಕ ಸಿದ್ದಲಿಂಗಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಾಹಿತಿ ಸರಜೂ ಕಾಟ್ಕರ್, ಕಥೆಗಾರ ಅಮರೇಶ ನುಗಡೋಣಿ, ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ, ಶಾಸಕ ವೀರಣ್ಣ ಚರಂತಿಮಠ, ‌ಪ್ರಾಚಾರ್ಯ ವಿಜಯಕುಮಾರ ಕಟಗಿಹಳ್ಳಿಮಠ ಪಾಲ್ಗೊಳ್ಳಲಿದ್ದಾರೆ.‌

ಮೊದಲ ಗೋಷ್ಠಿಯಲ್ಲಿ ನವೋದಯ ಕವಿ ಹಾಗೂ ಆಧುನಿಕ ವಚನಕಾರ ಆಗಿ ಪುರಾಣಿಕರು ವಿಷಯದ ಬಗ್ಗೆ ಗುರುಪಾದ ಮರೆಗುದ್ದಿ. ಪುರಾಣಿಕರ ನಾಟಕಗಳ ತಾತ್ವಿಕ ನೆಲೆಗಳು ವಿಷಯ ಆಧರಿಸಿ ರಾಜಶೇಖರ ಹಳೇಮನಿ ಹಾಗೂ ಆತ್ಮಚರಿತ್ರೆಯ ವೈಶಿಷ್ಟ್ಯದ ಬಗ್ಗೆ ಕೆ.ಆರ್.ಸಿದ್ದಗಂಗಮ್ಮ ಪ್ರಬಂಧ ಮಂಡನೆ ಮಾಡಲಿದ್ದಾರೆ.

ಎರಡನೇ ಗೋಷ್ಠಿಯಲ್ಲಿ ಮಕ್ಕಳ ಸಾಹಿತಿಯಾಗಿ ಪುರಾಣಿಕರು ವಿಷಯದ ಬಗ್ಗೆ ಆನಂದ ವಿ.ಪಾಟೀಲ, ಜೀವನ ಚರಿತ್ರೆಗಳ ಹಿಂದಿನ ದರ್ಶನದ ಸ್ವರೂಪ ವಿಷಯ ಆಧರಿಸಿ ಶಿವಾನಂದ ವಿರಕ್ತಮಠ ಪ್ರಬಂಧ ಮಂಡನೆ ಮಾಡಿದರೆ, ’ನನ್ನ ತಂದೆ ಹೀಗಿದ್ದರು’ ಎಂದು ಪುರಾಣಿಕರ ಪುತ್ರ ಪ್ರಸನ್ನಕುಮಾರ ತಮ್ಮ ನೆನಹುಗಳನ್ನು ಬಿಚ್ಚಿಡಲಿದ್ದಾರೆ. 

ಸಂಜೆ ನಡೆಯುವ ಸಮಾರೋಪದಲ್ಲಿ ಸಾಹಿತಿ ಬಾಳಾಸಾಹೇಬ ಲೋಕಾಪುರ ಹಾಗೂ ಬಿ.ವಿ.ವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ ಪಾಲ್ಗೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !