ತಿನ್ನುವ ಆಸೆ ಕಡಿಮೆಯಾಗುತ್ತಿರಲಿಲ್ಲ

7

ತಿನ್ನುವ ಆಸೆ ಕಡಿಮೆಯಾಗುತ್ತಿರಲಿಲ್ಲ

Published:
Updated:
Deccan Herald

ಸಿಹಿಯಾದ ತಿನಿಸು ತಿನ್ನುವ ನನ್ನಾಸೆಗೆ
ಅಮ್ಮ ಮಾಡಿದಳು ‘ಮೈಸೂರು ಪಾಕ್'
ನಾಲಿಗೆ ಮೇಲಿರಿಸಿದ ಕೂಡಲೇ ಕರಗುತ್ತಿತ್ತು,
ತಿನ್ನುವ ಆಸೆ ಕಡಿಮೆಯಾಗುತ್ತಿರಲಿಲ್ಲ...

ಸಿಹಿಯಾದ ತಿನಿಸು ತಿನ್ನುವ ನನ್ನಾಸೆಗೆ
ಅಮ್ಮ ಮಾಡಿದಳು ಸಕ್ಕರೆ ಪಾಕದ ‘ಜಾಮೂನು’
ನವೀನ ಜೇನುಸವಿಯನು ಉಂಡಂತಿತ್ತು,
ತಿನ್ನುವ ಆಸೆ ಕಡಿಮೆಯಾಗುತ್ತಿರಲಿಲ್ಲ...

ಸಿಹಿಯಾದ ತಿನಿಸು ತಿನ್ನುವ ನನ್ನಾಸೆಗೆ
ಅಮ್ಮ ಮಾಡಿದಳು ‘ತುಪ್ಪದ ಹೋಳಿಗೆ’
ಹೂರಣ ತುಪ್ಪದ ಸಿಹಿಬೆಸುಗೆಯಲಿ,
ತಿನ್ನುವ ಆಸೆ ಕಡಿಮೆಯಾಗುತ್ತಿರಲಿಲ್ಲ...

ಸಿಹಿಯಾದ ತಿನಿಸು ತಿನ್ನುವ ನನ್ನಾಸೆಗೆ
ಅಮ್ಮ ಮಾಡಿದಳು ‘ರವೆಯ ಉಂಡೆ’
ಡ್ರೈಫ್ರೂಟ್ ಬೆರಕೆಯ ಜೊತೆ ಚಪ್ಪರಿಸಲು,
ತಿನ್ನುವ ಆಸೆ ಕಡಿಮೆಯಾಗುತ್ತಿರಲಿಲ್ಲ..

ಸಿಹಿಯಾದ ತಿನಿಸು ತಿನ್ನುವ ನನ್ನಾಸೆಗೆ
ಅಮ್ಮ ಮಾಡಿದಳು ‘ಕರಿಗಡುಬು’ 
ಸಪ್ಪಳದೊಂದಿಗೆ ಸಿಹಿಯನು ನೆಮರಲು,
ತಿನ್ನುವ ಆಸೆ ಕಡಿಮೆಯಾಗುತ್ತಿರಲಿಲ್ಲ...

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !