ಹಾಲು ಉತ್ಪಾದಕರ ರಕ್ಷಣೆಗಾಗಿ ಕೋಚಿಮುಲ್ ವಿಮಾ: ಪ್ರಯೋಜನೆ ಪಡೆದುಕೊಳ್ಳಲು ಸಲಹೆ

7

ಹಾಲು ಉತ್ಪಾದಕರ ರಕ್ಷಣೆಗಾಗಿ ಕೋಚಿಮುಲ್ ವಿಮಾ: ಪ್ರಯೋಜನೆ ಪಡೆದುಕೊಳ್ಳಲು ಸಲಹೆ

Published:
Updated:
Deccan Herald

ಕೋಲಾರ: ‘ಹಾಲು ಉತ್ಪಾದಕರ ರಕ್ಷಣೆಗಾಗಿ ಒಕ್ಕೂಟದಿಂದ ಕೋಚಿಮುಲ್ ವಿಮಾ ಯೋಜನೆ ಜಾರಿಗೆ ತಂದಿದ್ದು, ಇದರ ಪ್ರಯೋಜನೆ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ ಸಲಹೆ ನೀಡಿದರು.

ತಾಲ್ಲೂಕಿನ ಅಮ್ಮನಲ್ಲೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ, ‘ಉತ್ಪಾಕದರು ವಿಮಾ ಪಾವತಿ ಮಾಡಿದರೆ ಅನಾಹುತ ಸಂಭವಿಸಿದಾಗ ಪರಿಹಾರ ಕಲ್ಪಿಸಲಾಗುವುದು’ ಎಂದು ಹೇಳಿದರು.

‘ಕೋಚಿಮುಲ್ ಹಾಲು ಉತ್ಪಾದಕರ ಬದುಕಿಗೆ ಆಸರೆಯಾಗಿದೆ. ಹಸುಗಳಿಗೆ ವಿಮೆ ಸೌಲಭ್ಯವಿದ್ದು, ರಾಜ್ಯ ಸರ್ಕಾರದ ಪ್ರೋತ್ಸಾಹಧನ ತಲುಪಿಸುತ್ತಿದ್ದು, ಸದಾ ರೈತರ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ’ ಎಂದರು.

‘ಹೈನೋದ್ಯಮ ಅವಿಭಜಿತ ಕೋಲಾರ ಜಿಲ್ಲೆಯ ರೈತರ ಜೀವಾಳವಾಗಿದ್ದು, ಹಾಲಿನ ಗುಣಮಟ್ಟ ವೃದ್ದಿಗೆ ಉತ್ಪಾದಕರು ಒತ್ತು ನೀಡುವ ಮೂಲಕ ಆರ್ಥಿಕವಾಗಿ ಸಬಲರಾಗಲು ಮುಂದಾಗಬೇಕು. ಇದಕ್ಕೆ ಒಕ್ಕೂಟದಿಂದ ದೊರೆಯಬೇಕಾದ ಸೌಕರ್ಯ ಪ್ರಮಾಣಿಕವಾಗಿ ಕಲ್ಪಿಸಲು ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.

‘ಬರ ಪೀಡಿತ ಜಿಲ್ಲೆಯಲ್ಲಿ ಹೈನೋದ್ಯಮವೇ ಬದುಕಾಗಿದೆ. ರೈತರು ನಿಮ್ಮದೇ ಕೋಚಿಮುಲ್‌ಗೆ ಗುಣಮಟ್ಟದ ಹಾಲು ಸರಬರಾಜು ಮಾಡಲು ಶ್ರದ್ದೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ಕಾರ್ಯದರ್ಶಿ ಸತ್ಯನಾರಾಯಣ ವರದಿ ವಾಚಿಸಿ, ‘ಸಂಘ ₹ 14 ಲಕ್ಷ ಲಾಭ ಗಳಿಸಿದ್ದು, ಇದರಲ್ಲಿ ₹ 6 ಲಕ್ಷ ಉತ್ಪಾದಕರಿಗೆ ಬೋನಸ್ ನೀಡಲು ನಿರ್ಧರಿಸಲಾಗಿದೆ’ ಎಂದು ವಿವರಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ವೀರಪ್ಪರೆಡ್ಡಿ, ಸಂಘದ ಅಧ್ಯಕ್ಷ ಎ.ಎನ್.ಮಹೇಶ್, ವಿಸ್ತರಣಾಧಿಕಾರಿ ಡಿ.ಎಸ್.ಸಮೀರ್ ಪಾಷ, ನಿರ್ದೇಶಕರಾದ ಶ್ರೀರಾಮರೆಡ್ಡಿ, ಮುನಿಯಪ್ಪ, ವೆಂಕಟರೆಡ್ಡಿ, ನಾರಾಯಣರೆಡ್ಡಿ, ಮುನೇಗೌಡ, ದೇವರಾಜ, ನಾರಾಯಣಸ್ವಾಮಿ, ಶ್ರೀರಾಮ, ಶ್ರೀನಿವಾಸ, ಪ್ರೇಮಾ, ಗೀತಮ್ಮ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !