ರಬಕವಿ ಬನಹಟ್ಟಿ: 2ರಿಂದ ಕಾಡಸಿದ್ಧೇಶ್ವರರ ಜಾತ್ರೆ

7
ಮೆರುಗು ನೀಡುವ ಮದ್ದು ಸುಡುವ ಸಂ‍ಪ್ರದಾಯ

ರಬಕವಿ ಬನಹಟ್ಟಿ: 2ರಿಂದ ಕಾಡಸಿದ್ಧೇಶ್ವರರ ಜಾತ್ರೆ

Published:
Updated:
Deccan Herald

ರಬಕವಿ ಬನಹಟ್ಟಿ: ಇಲ್ಲಿನ ಕಾಡಸಿದ್ಧೇಶ್ವರ ಜಾತ್ರೆ ಅಕ್ಟೋಬರ್ 2ರಿಂದ 4ರವರೆಗೆ ಮೂರು ದಿನಗಳ ಕಾಲ ಸಂಭ್ರಮದಿಂದ ನಡೆಯಲಿದೆ. 

ಮಂಗಳವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ, ಬುತ್ತಿ ಪೂಜೆ ನಡೆಯಲಿದೆ. ಸೋಮವಾರ ಮಧ್ಯ ರಾತ್ರಿಯಿಂದಲೇ ಸಾವಿರಾರು ಜನರು ದೀಡ ನಮಸ್ಕಾರ ಹಾಕಲು ಆರಂಭಿಸುತ್ತಾರೆ.

ಸಂಜೆ 8ಕ್ಕೆ ನಗರದ ಮಂಗಳವಾರ ಪೇಟೆಯ ಪ್ರಮುಖ ಬೀದಿಯಲ್ಲಿ ವೈಭವದ ರಥೋತ್ಸವ ನಡೆಯಲಿದೆ. ರಥೋತ್ಸವದ ಸಂದರ್ಭದಲ್ಲಿ ಇಲ್ಲಿಯ ಜನರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ನಾಲ್ಕು ಗಂಟೆಗಿಂತ ಹೆಚ್ಚು ಕಾಲ ಮದ್ದು ಸುಡುವ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ.

ಇದೇ 3ರಂದು ಮಧ್ಯಾಹ್ನ 3.30ಕ್ಕೆ ದೇವಸ್ಥಾನದ ಆವರಣದಲ್ಲಿ ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ಪಂಜಾಬ್, ದೆಹಲಿ, ಮಹಾರಾಷ್ಟ್ರ ಮತ್ತು ಕರ್ನಾಟಕದ ನೂರಾರು ಪೈಲ್ವಾನರು ಪಾಲ್ಗೊಳ್ಳಲಿದ್ದಾರೆ.

ದಿ.4ರಂದು ಮಧ್ಯಾಹ್ನ ರೈತ ಸಮುದಾಯದವರು ನಡೆಸಿಕೊಡುವ ಕಳಸೋತ್ಸವದೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ.
ಜಾತ್ರೆಯ ಮೂರು ದಿನಗಳ ಕಾಲ ದೇವಸ್ಥಾನದ ಆವರಣದಲ್ಲಿ ಕಾಡಸಿದ್ಧೇಶ್ವರ ಅನ್ನದಾಸೋಹ ಭಕ್ತ ಮಂಡಳಿಯಿಂದ ಅನ್ನ ಪ್ರಸಾದ ನೆರವೇರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !