ಹಣದ ಆಮಿಷ ವಿಷಯ ಗೊತ್ತಿರಲಿಲ್ಲ: ಪರಮೇಶ್ವರ್‌

7

ಹಣದ ಆಮಿಷ ವಿಷಯ ಗೊತ್ತಿರಲಿಲ್ಲ: ಪರಮೇಶ್ವರ್‌

Published:
Updated:

ಧಾರವಾಡ: ‘ಬಿಜೆಪಿ ಸೇರುವಂತೆ ಒತ್ತಡ ಬರುತ್ತಿರುವ ವಿಷಯವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನನಗೆ ತಿಳಿಸಿದ್ದರು. ಅದು ಬಿಟ್ಟರೆ ₹ 30 ಕೋಟಿ ಆಮಿಷ ಒಡ್ಡಿರುವ ವಿಷಯವನ್ನು ಅವರು ಹೇಳಿರಲಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದರು.

‘ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಲಕ್ಷ್ಮಿ ಅವರು ಈ ವಿಷಯ ಪ್ರಸ್ತಾಪಿಸಿದ್ದರು. ಹಣದ ಆಮಿಷ ಒಡ್ಡಿರುವ ಬಗ್ಗೆ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದು, ಆ ಕುರಿತು ಈಗಿನ ಅಧ್ಯಕ್ಷರು ಗಮನಹರಿಸಲಿದ್ದಾರೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್‌ ಎಂದು ಸಿದ್ದರಾಮಯ್ಯ ಯಾವ ಅರ್ಥದಲ್ಲಿ ಹೇಳಿಕೊಂಡಿದ್ದಾರೋ ಗೊತ್ತಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !