ಅಭಿಲಾಷ್‌ ಟಾಮಿ ಆದಷ್ಟು ಬೇಗ ತವರಿಗೆ: ಭಾರತೀಯ ನೌಕಾಸೇನೆ

7

ಅಭಿಲಾಷ್‌ ಟಾಮಿ ಆದಷ್ಟು ಬೇಗ ತವರಿಗೆ: ಭಾರತೀಯ ನೌಕಾಸೇನೆ

Published:
Updated:
Deccan Herald

ಮೆಲ್ಬರ್ನ್‌: ಭಾರತದ ನೌಕಾ ಪಡೆ ಕಮಾಂಡರ್ ಅಭಿಲಾಷ್ ಟಾಮಿ ಆದಷ್ಟು ಬೇಗ ಭಾರತಕ್ಕೆ ಹಿಂತಿರುಗಲು ಸಿದ್ಧತೆ ನಡೆಸಿದ್ದಾರೆ ಎಂದು ಭಾರತೀಯ ನೌಕಾಸೇನೆ ತಿಳಿಸಿದೆ. 

ಒಬ್ಬಂಟಿಯಾಗಿ ವಿಶ್ವಪರ್ಯಟನೆ ನಡೆಸುವ ‘ಗೋಲ್ಡನ್ ಗ್ಲೋಬ್ ರೇಸ್’ ಸ್ಪರ್ಧೆಯಲ್ಲಿ ಟಾಮಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಮೂರು ದಿನಗಳ ಹಿಂದೆ ಅವರ ಹಾಯಿದೋಣಿ ಹಾನಿಗೊಳಗಾಗಿ ಅವರು ಸಮುದ್ರದ ಮಧ್ಯಭಾಗದಲ್ಲಿ ಸಿಲುಕಿದ್ದರು. ಬೆನ್ನಿನ ಭಾಗಕ್ಕೆ ತೀವ್ರ ಪೆಟ್ಟಾಗಿದ್ದರಿಂದ ಹಾಯಿದೋಣಿಯಲ್ಲಿ ಅವರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. 

ಆಸ್ಟ್ರೇಲಿಯಾದ ರಕ್ಷಣಾ ಸಹಕಾರ ಕೇಂದ್ರ, ರಕ್ಷಣಾ ಇಲಾಖೆ ಹಾಗೂ ಭಾರತೀಯ ನೌಕಾಪಡೆ ಜತೆಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು. ಇದಕ್ಕಾಗಿ ಭಾರತದ ಪಿ–8ಐ ಸರ್ವೇಕ್ಷಣಾ ವಿಮಾನವನ್ನು ನಿಯೋಜಿಸಿತ್ತು. ಟಾಮಿ ಅವರನ್ನು ಹಿಂದೂಮಹಾಸಾಗರದ ದಕ್ಷಿಣ ಭಾಗದಲ್ಲಿ ರಕ್ಷಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !