ಸಕಲೇಶಪುರರೈಲು ಸಂಚಾರ10ರಿಂದ

7

ಸಕಲೇಶಪುರರೈಲು ಸಂಚಾರ10ರಿಂದ

Published:
Updated:

ಸಕಲೇಶಪುರ: ಸಕಲೇಶಪುರ– ಸುಬ್ರಹ್ಮಣ್ಯ ನಡುವೆ ಪ್ರಯಾಣಿಕರ ರೈಲು ಸಂಚಾರ ಇದೇ10ರಿಂದ ಪುನರ್‌ ಆರಂಭಿಸಲಾಗುವುದು ಎಂದು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಾರ್ಗದಲ್ಲಿ ಭೂ ಕುಸಿತದ ತೆರವು ಕಾರ್ಯ ಬಹುತೇಕ ಮುಗಿದಿದೆ. ಮತ್ತೆ ಮಳೆ ಬಂದು ಸಮಸ್ಯೆ ಆದರೆ ಮಾತ್ರ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಯಾವ ಸಮಸ್ಯೆಯೂ ಎದುರಾಗದಿದ್ದರೆ ಅ. 10ರಿಂದ ಯಶವಂತಪುರ– ಮಂಗಳೂರು, ಕಾರವಾರ– ಬೆಂಗಳೂರು ನಡುವಿನ ಪ್ರಯಾಣಿಕರ ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ಭಾರಿ ಮಳೆಯಿಂದಾಗಿ ಸಕಲೇಶಪುರ– ಸುಬ್ರಹ್ಮಣ್ಯ ನಡುವಿನ ರೈಲು ಮಾರ್ಗದಲ್ಲಿ ಸುಮಾರು 64 ಕಡೆ ಭೂ ಕುಸಿತವಾಗಿ ಆ. 14ರಿಂದ ರೈಲು ಸಂಚಾರ ಸಂಪೂರ್ಣ ಬಂದ್‌ ಆಗಿತ್ತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !